Webdunia - Bharat's app for daily news and videos

Install App

ಮಗು ರಕ್ಷಿಸಿ ಪ್ರಾಣಬಿಟ್ಟ ಅಪ್ಪ

Webdunia
ಬುಧವಾರ, 2 ಮೇ 2018 (13:10 IST)
ನೀರಿನಲ್ಲಿ ಮುಳುಗುತ್ತಿದ್ದ ಒಂದು ವರ್ಷದ ಮಗನನ್ನು ರಕ್ಷಿಸಿ ತಂದೆಯೊಬ್ಬ ಪ್ರಾಣ ಬಿಟ್ಟಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೀರೇಶ್ವರ ಗ್ರಾಮದ ಕೆರೆಯಲ್ಲಿ ನಡೆದಿದೆ. 
ಬೀರೇಶ್ವರ ಗ್ರಾಮದ ಫೈರೋಜ್ ಎಂಬಾತ ಮಗನನ್ನು ರಕ್ಷಿಸಿ ಪ್ರಾಣಬಿಟ್ಟ ತಂದೆ ಆಗಿದ್ದಾನೆ. ಪೈರೋಜ್ ಪತ್ನಿ ಜಬಿನ್ ತಾಜ್ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ಬಟ್ಟೆ ತೊಳೆಯುವ ಸಮಯದಲ್ಲಿ ಜಬಿನ್ ತಾಜ್ ಜೊತೆಯಲ್ಲೇ ಇದ್ದ ಪತಿ ಪೈರೋಜ್ ಮತ್ತು ಒಂದು ವರ್ಷದ ಮಗ,  ಈ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾನೆ.
 
 ಮಗನನ್ನು ರಕ್ಷಿಸಲು ನೀರಿಗಿಳಿದ ಪೈರೋಜ್, ಮಗನನ್ನು ರಕ್ಷಿಸಿ ನೀರಿನಲ್ಲೇ ಮುಳುಗಿ ಪ್ರಾಣಬಿಟ್ಟಿದ್ದಾನೆ. ಸರಿಯಾಗಿ ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಯಿಂದ ಪೈರೋಜ್ ಶವ ಹೊರಕ್ಕೆ ತೆಗೆಯಲಾಗಿದೆ. 
 
ನೀರಿನಲ್ಲಿ ಮುಳುಗಿದ್ದ ಮಗು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ನಾಗಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟಿವಿಕೆ ನೇತೃತ್ವದ ಮೈತ್ರಿಗೆ 'ಜಾತ್ಯತೀತ ಸಾಮಾಜಿಕ ನ್ಯಾಯ ವಿಜಯ ಮೈತ್ರಿಕೂಟ' ಹೆಸರು

ಮಳೆಯ ಕೊರತೆ: ರಾಜ್ಯದಲ್ಲಿ ಬರಗಾಲದ ಸ್ಥಿತಿ ನಿರ್ಮಾಣ

SIR, ರಾಜ್ಯದಲ್ಲಿ 43.81ಲಕ್ಷ ಮತದಾರರಿಗೆ ಚುನಾವಣಾ ನೋಟಿಸ್‌

BRICSನ ಕಳೆದ ಮೂರು ಸಭೆಗಳಿಂದ ಫಲಿತಾಂಶ ಕಂಡಿಲ್ಲ: ಚಿದಂಬರಂ ಅಸಮಾಧಾನ

ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧದ ಕಾಲ್ನಡಿಗೆ ಯಶಸ್ವಿ: ವಿಜಯೇಂದ್ರ

ಮುಂದಿನ ಸುದ್ದಿ
Show comments