ಬಿಎಸ್‌ವೈ, ಬಿಜೆಪಿ ನಾಯಕರಿಗೆ ಮೀಟರಿಲ್ಲ, ಹೇಳಿಕೆಗೆ ಡಿವಿಎಸ್ ತಿರುಗೇಟು

Webdunia
ಶನಿವಾರ, 23 ಸೆಪ್ಟಂಬರ್ 2017 (16:32 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರಿಗೆ ಮೀಟರಿಲ್ಲ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರದ ಮದದಲ್ಲಿರುವ ಸಿಎಂ ಸಿದ್ದರಾಮಯ್ಯಗೆ ತಾನೇನು ಮಾತನಾಡುತ್ತಿದ್ದೇನೆ ಎನ್ನುವ ಅರಿವು ಕೂಡಾ ಇಲ್ಲ. ವಿಪಕ್ಷಗಳ ವಿರುದ್ಧ ತಪ್ಪು ಪದಗಳ ಬಳಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
 
ಸ್ವಪಕ್ಷೀಯರ ಆರೋಪಗಳನ್ನು ತಡೆದುಕೊಳ್ಳಲು ಸಿಎಂ ಸಿದ್ದರಾಮಯ್ಯಗೆ ಆಗುತ್ತಿಲ್ಲ. ಆದ್ದರಿಂದ ಅವರ ಮನಸ್ಸು ವಿಚಲಿತವಾಗಿದೆ. ವಿಚಲಿತ ಮನಸ್ಸಿನಿಂದಾಗಿ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ತಾನೇನು ಮಾತನಾಡುತ್ತಿದ್ದೇನೆ ಎನ್ನುವ ಅರಿವು ಅವರಿಗಿಲ್ಲ ಎಂದು ತಿಳಿಸಿದ್ದಾರೆ. 
 
ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿರುವವರೆಗೆ ಅವರಿಗೆ ಪ್ರತಿಯೊಬ್ಬರು ಗೌರವ ಕೊಡುತ್ತಾರೆ. ಸಿಎಂ ಸ್ಥಾನ ಹೋದ ಕೂಡಲೇ ಅವರು ಚರಿತ್ರೆಯಿಂದ ಕಣ್ಮರೆಯಾಗುತ್ತಾರೆ ಎಂದು ಗುಡುಗಿದ್ದಾರೆ.
 
ದೇಶದಲ್ಲಿ ಹಲವಾರು ಸಿಎಂಗಳನ್ನು ನೋಡಿದ್ದೇನೆ. ಆದರೆ, ಇಂತಹ ಬಾಲಿಶ ಹೇಳಿಕೆಗಳನ್ನು ನೀಡುವಂತಹ ಸಿಎಂನನ್ನು ನೋಡಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

CJP ಪ್ರತಿಭಟನೆಯಲ್ಲಿ ನೇಪಾಳ ಥರಾ ಮಾಡ್ತೀವಿ, ಪಾರ್ಲಿಮೆಂಟ್ ಭವನವನ್ನೇ ಕಿತ್ತು ಹಾಕ್ತೀವಿ ಎಂದು ಕಿರುಚಾಡಿದ ಯುವಕ Video

ಸಿಎಂ ಜೋಸೆಫ್‌ ವಿಜಯ್ ವಿರುದ್ಧ ನಾಲಿಗೆ ಹರಿಬಿಟ್ಟ ಡಿಎಂಕೆ ಶಾಸಕ ಜಿ.ಆರ್. ಮಾರ್ಕಂಡಿಯನ್ ಅರೆಸ್ಟ್‌

50 ಬಾರಿ ಪ್ರಯತ್ನಿಸಿದರೂ ಸಿಗದ ಸರ್ಕಾರಿ ಕೆಲಸ: ರಾಜ್ಯಪಾಲರಿಂದ ಚಿನ್ನದ ಪದಕ ಪಡೆದಿದ್ದ ಯುವಕ ಸಾವಿಗೆ ಶರಣು

ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಯಾಕೆ ಅಜ್ಜಿ ಚನ್ನಮ್ಮನ ಅಂತ್ಯಸಂಸ್ಕಾರಕ್ಕೆ ಬರಲಿಲ್ಲ: ಇವರೇ ಕಾರಣವಂತೆ

ಉಪವಾಸ ಕೈಬಿಡಲು ಮೂರು ಷರತ್ತುಗಳನ್ನು ಹಾಕಿದ ಸೋನಮ್ ವಾಂಗ್ಚುಕ್

ಮುಂದಿನ ಸುದ್ದಿ
Show comments