Publish Date: Sat, 10 Feb 2024 (19:30 IST)
Updated Date: Sat, 10 Feb 2024 (19:18 IST)
ಬೆಂಗಳೂರು : ದೇಶ ವಿರೋಧಿ ಹೇಳಿಕೆ ನೀಡಿರುವ ಡಿ.ಕೆ. ಸುರೇಶ್ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಗುಂಡು ಹೊಡೆದು ಕೊಲ್ಲುವ ಕಾನೂನು ಜಾರಿಗೊಳಿಸಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಈಶ್ವರಪ್ಪ ಅವರಿಗೆ ಒಂದು ವಾರ ಟೈಂ ಕೊಡ್ತೇನೆ. ಬಂದು ಗುಂಡು ಹೊಡೆಯಲಿ ಎಂದು ಸವಾಲು ಹಾಕಿದ್ದಾರೆ. ನಾನೊಬ್ಬ ಸಣ್ಣ ವ್ಯಕ್ತಿ. ಕನ್ನಡಿಗರ ಪರವಾಗಿ ನಾನು ಮಾತನಾಡಿದ್ದಕ್ಕೆ ಈಶ್ವರಪ್ಪ ಈ ರೀತಿ ಹೇಳಿರಬಹುದು ಎಂದು ನುಡಿದಿರುವ ಡಿ.ಕೆ. ಸುರೇಶ್ ಗಾಂಧೀಜಿಯವರನ್ನು ಕೊಂದ ಪಕ್ಷ ಅವರದು. ಈ ಹೇಳಿಕೆಯಲ್ಲಿ ಆಶ್ಚಯರ್ವೇನಿಲ್ಲ ಎಂದಿದ್ದಾರೆ.
ಬಡವರ ಮಕ್ಕಳನ್ನು ರೊಚ್ಚಿಗೆ ಎಬ್ಬಿಸಿ ಬಾವಿಗೆ ತಳ್ಳಲು ಈ ರೀತಿಯ ಪ್ರಚೋದನಾತ್ಮಕ ಹೇಳಿಕೆ ನೀಡಲಾಗುತ್ತಿದೆ ಎಂದು ಆರೋಪಿಸಿದ ಡಿ.ಕೆ. ಸುರೇಶ್ ಪಕ್ಷದಲ್ಲಿ ಅವರನ್ನು ಕಡೆಗಣಿಸಲಾಗುತ್ತಿದೆ. ಹೀಗಾಗಿ ಅವರು ವಿವಾದದ ಮೂಲಕ ಮುನ್ನೆಲೆಯಲ್ಲಿರಲು ಯತ್ನಿಸುತ್ತಿದ್ದಾರೆ ಎಂದರು.