ಆತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ.ಇವತ್ತು ಭಾನುವಾರ ಆಗಿದ್ರಿಂದ ಮನೆಯಲ್ಲೇ ಇದ್ದ.ತಂದೆ ತಾಯಿ ಇಬ್ರು ಕೆಲಸಕ್ಕೆ ಹೋಗಿದ್ರು.ಆಟವಾಡ್ತಾ ಮನೆ ಪಕ್ಕದಲ್ಲೇ ಇದ್ದ ಸಿಲಿಂಡರ್ ರೀ ಫಿಲ್ಲಿಂಗ್ ಅಡ್ಡೆಗೆ ಕಾಲಿಟ್ಟಿದ್ದ.ಅಷ್ಟೇ ನೋಡ ನೋಡ್ತಿದ್ದಂತೆ ದೇಹ ಛಿದ್ರಛಿದ್ರವಾಗಿಬಿಡ್ತು.ಪೋಷಕರ ಕನಸ್ಸೆಲ್ಲ ನುಚ್ಚುನೂರಾಗಿಬಿಡ್ತು.ಮಗನನ್ನ ಕಳೆದುಕೊಂಡ ಹೆತ್ತವರ ಗೋಳಾಟ ಮನಕಲಕುವಂತಿತ್ತು.ಹೆತ್ತ ಕರುಳ ಒದ್ದಾಟ..ಮಗನ ನೆನೆದು ಕಣ್ಣೀರು..ಸಂಬಂಧಿಕರ ಆಕ್ರಂದನ.ಇವರ ಈ ನೋವಿಗೆ ಸಮಾಧಾನ ಹೇಳಕ್ಕಾಗುತ್ತಾ?ತನ್ನದಲ್ಲ ತಪ್ಪಿಗೆ ಬಲಿಯಾದ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಕ್ಕಾಗುತ್ತಾ..?ಸಿಲಿಕಾನ್ ಸಿಟಿಯಲ್ಲಿ ನಡೆದ ಹೃದಯವಿದ್ರಾವಕ ಘಟನೆ ಎಲ್ಲರನ್ನು ದುಖಃಕ್ಕೆ ದೂಡಿದೆ.
16 ವರ್ಷದ ಮಹೇಶ್ ಚೋಳನಾಯಕನಹಳ್ಳಿ ಸರ್ಕಾರಿ ಶಾಲೆಯಲ್ಲಿ 6 ನೇ ತರಗತಿ ಓದ್ತಿದ್ದ.ಯಾದಗಿರಿ ಜಿಲ್ಲೆ ರಾಮಸಮುದ್ರ ಮೂಲದ ಮಲ್ಲಪ್ಪ ಹಾಗೂ ಸರಸ್ವತಿ ದಂಪತಿಯ ಎರಡನೇ ಪುತ್ರ.ಐದಾರು ವರ್ಷದ ಹಿಂದೆ ಬೆಂಗಳೂರಿನ ಹೆಬ್ಬಾಳದ ಗುಡ್ಡದಹಳ್ಳಿಯಲ್ಲಿ ಸಣ್ಣದೊಂದು ಸೀಟ್ ಮನೆ ಮಾಡಿಕೊಂಡು ದಂಪತಿ ವಾಸವಿದ್ರು.ಪತ್ನಿ ಕೂಲಿ ಕೆಲಸ ಮಾಡಿಕೊಂಡಿದ್ರೆ ಪತಿ ಟ್ರಾಕ್ಟರ್ ಚಾಲಕನಾಗಿದ್ದ.ತಮಗಿದ್ದ ಮೂವರು ಮಕ್ಕಳನ್ನು ಶಾಲೆಗೆ ಸೇರಿಸಿ ಓದಿಸ್ತಿದ್ರು.ಆದ್ರೆ ಇವತ್ತು ಘನಘೋರವೇ ನಡೆದಿದೆ.ಭಾನುವಾರ ಆಗಿರೋದ್ರಿಂದ ಮಕ್ಕಳು ಮನೆಯಲ್ಲೇ ಇದ್ರು ತಂದೆ ತಾಯಿ ಇಬ್ರು ಕೆಲಸಕ್ಕೆ ಹೋಗಿದ್ರು.ಈ ವೇಳೆ ಮನೆ ಪಕ್ಕದಲ್ಲೇ ಇದ್ದ ಸಿಲಿಂಡರ್ ರೀ ಫಿಲ್ಲಿಂಗ್ ಮಾಡುವ ಜಾಗಕ್ಕೆ ಎರಡನೇ ಪುತ್ರ ಮಹೇಶ್ ಹೋಗಿದ್ದಾನೆ.ಸಿಲಿಂಡರ್ ಬ್ಲಾಸ್ಟ್ ಆಗಿ ದೇಹ ಛಿದ್ರ ಛಿದ್ರವಾಗಿತ್ತು.ತಕ್ಷಣ ಹತ್ತಿರವೇ ಇದ್ದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತಾದ್ರು..ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ದೇವರಾಜ್ ಎಂಬುವರಿಗೆ ಸೇರಿದ ಈ ಮನೆಯಲ್ಲಿ ಲಿಯಾಕತ್ ಎಂಬಾತ ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ದಂಧೆ ಮಾಡ್ತಿದ್ದ.ಅಕ್ಕಪಕ್ಕ ಮನೆಗಳಿದ್ರು ಕೇರೇ ಮಾಡದೇ ತನ್ನ ಕೆಲಸ ಮಾಡ್ಕೊಂಡಿದ್ದ.ಘಟನೆ ಬಳಿಕ ಆತ ಪರಾರಿಯಾಗಿದ್ದಾನೆ.ಘಟನಾ ಸ್ಥಳಕ್ಕೆ ಭೇಟಿಕೊಟ್ಟ ಹೆಬ್ಬಾಳ ಪೊಲೀಸರಿಗೆ ಮನೆಯೊಳಗೆ ಸಿಲಿಂಡರ್ ಇರೋದು ಗೊತ್ತಾಗಿದೆ.ಸದ್ಯ ಗೋಡೌನ್ ಲಾಕ್ ಮಾಡಿದ್ದು.ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದೆ.ತನಿಖೆ ಕೈಗೊಂಡಿರೊ ಪೊಲೀಸರು ಆರೋಪಿ ಲಿಯಾಕತ್ ಪತ್ತೆಗೆ ಬಲೆಬೀಸಿದ್ದಾರೆ.ತನಿಖೆ ಬಳಿಕವಷ್ಟೇ ಘಟನೆಗೆ ನಿಖರ ಕಾರಣ ಏನು ಅನ್ನೋದು ಗೊತ್ತಾಗಲಿದೆ.