Webdunia - Bharat's app for daily news and videos

Install App

ಸಿಟಿ ಹುಡ್ಗಗರಿಗೆ ಇದೆಯ್ಯಂತೆ ಸೈಬರ್ ಕಾಂಡ್ರಿಯಾಸಿಸ್…!

Webdunia
ಶುಕ್ರವಾರ, 14 ಏಪ್ರಿಲ್ 2023 (14:05 IST)
ಮಾರ್ಡನ್ ಯುಗದಲ್ಲಿ ಎಲ್ಲವೂ ಮಾರ್ಡನ್....ಹಾಕೋ ಬಟ್ಟೆಯಿಂದ ,ತಿನ್ನೋ ಆಹಾರದ ವರೆಗೂ ಏನಾದ್ರೂ ಮಾಹಿತಿ ಬೇಕಿದ್ರೆ ಮಕ್ಳು, ವಿಧ್ಯಾರ್ಥಿಗಳು ,ಪೋಷಕರ ,ಶಿಕ್ಷಕರ ಬಳಿ ಕೇಳ್ತಾರೆ ಅನ್ನೋ ಕಾಲದಲ್ಲಿ ನಾವಿದ್ವಿ....ಆದ್ರೆ ಈಗನ  ವಿಧ್ಯಾರ್ಥಿಗಳು ಫುಲ್ ಅಪ್ಡೇಟ್ ಆಗಿ ಏನೇ ಆದ್ರೂ ,ಏನೇ ಡೌಟ್ ಇದ್ರೂ ಕೇಳೊದು ಗೂಗಲ್ ಅಪ್ಪನನ್ನ....ಇದೇ ಇವಾಗ ಮತ್ತೊಂದು ಟೆಕ್ ಗೀಳಿಗೆ ಕಾರಣವಾಗಿದೆ. ನಿಮಾನ್ಸ್ ಸಂಸ್ಥೆ ಒಂದು ಅಧ್ಯಯನವನ್ನ ಮಾಡಿದೆ....ಈ ಅಧ್ಯಯನದಲ್ಲಿ ಬಹಿರಂಗವಾಗಿರೋದು  ಅಚ್ಚರಿಯಾಗಿದೆ. 
 
ಬೆಂಗಳೂರಿನ ಯುವಜನರು ಆನ್ಲೈನ್ನಲ್ಲಿ ಹೆಚ್ಚಾಗಿ ಆರೋಗ್ಯದ ಬಗ್ಗೆ ಮಾಹಿತಿಯನ್ನು ಹುಡುಕುತ್ತಿದ್ದಾರೆ. ಇದನ್ನು ‘ಸೈಬರ್ ಕಾಂಡ್ರಿಯಾಸಿಸ್’ ಎಂದು ಕರೆಯಲಾಗುತ್ತದೆ.ಈ ಅಧ್ಯಯನದಲ್ಲಿ ಬೆಂಗಳೂರಿನ 356 ಕಾಲೇಜು ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ಒಳಪಡಿಸಿದೆ. ಈ ಪೈಕಿ, 48.6% ವಿದ್ಯಾರ್ಥಿಗಳಲ್ಲಿ ಸೈಬರ್ ಕಾಂಡ್ರಿಯಾಸಿಸ್ ಕಾಣಿಸಿಕೊಂಡಿದೆ.
 
ಅಧ್ಯಯನದಲ್ಲಿ ಭಾಗವಹಿಸಿದವರೆಲ್ಲರೂ 18 ರಿಂದ 25 ವರ್ಷ ವಯಸ್ಸಿನ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು. ಸೈಬರ್ ಕಾಂಡ್ರಿಯಾಸಿಸ್ ಹರಡುವಿಕೆಯ ಕುರಿತು ಬೆಂಗಳೂರಿನಲ್ಲಿ ಇದು ಮೊದಲ ಅಧ್ಯಯನವಾಗಿದೆ. ಅಧ್ಯಯನವು ಸ್ಮಾರ್ಟ್ ಫೋನ್ ಚಟ ಮತ್ತು ಭಾಗವಹಿಸುವವರಲ್ಲಿ ಆರೋಗ್ಯದ ಆತಂಕದ ಬಗ್ಗೆ ವಿವರಿಸಿದೆ . ಸೈಬರ್ ಕಾಂಡ್ರಿಯಾಸಿಸ್ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ತೊಂದರೆ ಅನುಭವಿಸುವುದರ ಜೊತೆಗೆ, ವ್ಯಕ್ತಿಯು ಪೂರ್ವಗ್ರಹ ಪೀಡಿತರಾಗಬಹುದು ಹಾಗೂ ವೈದ್ಯರನ್ನು ಬದಲಾಯಿಸಬಹುದು ಅಥವಾ ವೈದ್ಯರೊಂದಿಗಿನ ಅವರ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ಅವರು ಸ್ವಯಂ ರೋಗನಿರ್ಣಯ ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಬಹುದು ಅನ್ನೋದು ಸಂಶೋಧನೆಯಲ್ಲಿ ಬಹಿರಂಗವಾಗಿದೆ.
 
 ಈ ರೀತಿಯಾಗಿ ಯಾವುದೇ ಆರೋಗ್ಯ ಸಮ್ಯಸೆಯ ಮಾಹಿತಿಯನ್ನ ಆನ್ಲೈನ್ ನಲ್ಲಿ ಹುಡುಕೊದ್ರಿಂದ ಯುವಕರ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ ಅನ್ನೋದು ಕೂಡ ಅಷ್ಟೇ ಸತ್ಯ..ಈ ರೀತಿಯಾಗಿ ನೀವು ಕೂಡ ಆರೋಗ್ಯದ ಮಾಹಿತಿ ಹೆಚ್ಚಾಗಿ ಹುಡುಕುತ್ತಿದ್ದರೆ ಅಥವಾ ನಿಮ್ಮ ಮನೇಲಿ ಈ ರೀತಿಯಾಗಿ ಮಕ್ಳು ಜೊತೆಗೆ ಪೋಚಕರು ಹುಡುಕಾಟ ನಡೆಸುತ್ತಿದ್ದರೆ  ಅವರನ್ನು ನೋಡ್ಕೊಳಿ.... ಜೊತೆಗೆ ಎಚ್ಚರದಿಂದರಿ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments