Select Your Language

Notifications

webdunia
webdunia
webdunia
webdunia

ಪ್ಯಾಸೆಂಜರ್ ಆದಾಯದಲ್ಲಿ ರೈಲ್ವೆ 2,755 ಕೋಟಿ ರೂ. ದಾಖಲೆ

ಪ್ಯಾಸೆಂಜರ್ ಆದಾಯದಲ್ಲಿ ರೈಲ್ವೆ 2,755 ಕೋಟಿ ರೂ. ದಾಖಲೆ
ಹುಬ್ಬಳ್ಳಿ , ಶುಕ್ರವಾರ, 14 ಏಪ್ರಿಲ್ 2023 (12:20 IST)
ಹುಬ್ಬಳ್ಳಿ : ಭಾರತೀಯ ರೈಲ್ವೆಯ ಎಲ್ಲಾ ವಲಯಗಳ ಪೈಕಿ ನೈರುತ್ಯ ರೈಲ್ವೆ ಸಮಯಪಾಲನೆಯಲ್ಲಿ ಶೇ. 93.12ರಷ್ಟು ಪಡೆದು 3ನೇ ಸ್ಥಾನದಲ್ಲಿದೆ. 2022-23ರ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆ 150.34 ಮಿಲಿಯನ್ಗೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಮೂಲಕ 2,755.35 ಕೋಟಿ ರೂ. ಆದಾಯ ಗಳಿಸಿದೆ.
 
ನೈರುತ್ಯ ರೈಲ್ವೆ ವಲಯದ ಇತಿಹಾಸದಲ್ಲಿ ಇದು ಸಾರ್ವಕಾಲಿಕ ಹಾಗೂ ಅತ್ಯಧಿಕ ಪ್ರಯಾಣಿಕರ ಆದಾಯವಾಗಿರುತ್ತದೆ. 2022-23ನೇ ಹಣಕಾಸು ವರ್ಷದಲ್ಲಿ ನೈರುತ್ಯ ರೈಲ್ವೆ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ರೈಲು ಸೇವೆ ಒದಗಿಸುವ ಉದ್ದೇಶದಿಂದ ಹಾಗೂ ಸಮಯಪಾಲನೆಯ ಸುಧಾರಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪ್ರಯಾಣಿಕರ ಮೂಲಸೌಕರ್ಯಗಳ ಉನ್ನತೀಕರಣ ಕಾರ್ಯಗಳನ್ನು ಕೈಗೊಂಡ ಹೊರತಾಗಿಯೂ ಸಮಯ ಪಾಲನೆಯಲ್ಲಿ ಅತ್ಯುತ್ತಮ ಸಾಧನೆ ಗೈದಿದೆ. 

2022-23ರ ಆರ್ಥಿಕ ವರ್ಷದ ಅವಧಿಯಲ್ಲಿ 116 ರೈಲುಗಳ ವೇಗವನ್ನು ಹೆಚ್ಚಿಸಲಾಗಿದ್ದು, 2,816 ನಿಮಿಷಗಳ ಸಮಯ ಉಳಿಸಿದಂತಾಗಿದೆ. ವಿದ್ಯುದ್ದೀಕರಣ ವೇಗಪಡೆದುಕೊಂಡಿರುವುದರಿಂದ ಮಾಲಿನ್ಯ ಕಡಿಮೆಗೊಳಿಸಲು ಮತ್ತು ಡೀಸೆಲ್ ಉಳಿಸಲು 24 ರೈಲುಗಳನ್ನು ವಿದ್ಯುತ್ಗೆ ವರ್ಗಾವಣೆ ಮಾಡಲಾಗಿದೆ.

ರಜೆ ಮತ್ತು ಹಬ್ಬದ ಸಮಯದಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ 291 ವಿಶೇಷ ರೈಲುಗಳನ್ನು (ಒಟ್ಟು 3,028 ಟ್ರಿಪ್ಗಳು) ವಿವಿಧ ಸ್ಥಳಗಳಿಗೆ ಓಡಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 253 ಬೋಗಿಗಳನ್ನು ಶಾಶ್ವತವಾಗಿ ಮತ್ತು 224 ಬೋಗಿಗಳನ್ನು ತಾತ್ಕಾಲಿಕವಾಗಿ ಹೆಚ್ಚಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಬೃಹತ್ ಮತದಾನ ಜಾಗೃತಿ