Select Your Language

Notifications

webdunia
webdunia
webdunia
webdunia

ನನ್ನ ಗಂಡ ಅಂತಹವರಲ್ಲ ಎನ್ನುವುದಕ್ಕೆ ಈ ಮಹಿಳೆಯರೇ ಸಾಕ್ಷಿ: ಸಿಟಿ ರವಿ ಪತ್ನಿ

CT Ravi

Krishnaveni K

ಚಿಕ್ಕಮಗಳೂರು , ಶನಿವಾರ, 21 ಡಿಸೆಂಬರ್ 2024 (09:40 IST)
Photo Credit: Instagram
ಚಿಕ್ಕಮಗಳೂರು: ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅಶ್ಲೀಲ ಪದ ಪ್ರಯೋಗಿಸಿ ನಿಂದಿಸಿದ್ದಾರೆ ಎಂಬ ಆರೋಪದಲ್ಲಿ ಬಂಧಿತರಾಗಿದ್ದ ಶಾಸಕ ಸಿಟಿ ರವಿ ಬಿಡುಗಡೆಯಾಗುತ್ತಿದ್ದಂತೇ ಅವರ ಪತ್ನಿ ಪಲ್ಲವಿ ಖುಷಿಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಹಬ್ಬದ ವಾತಾವರಣ ಕಂಡುಬಂದಿದೆ.

ಸಿಟಿ ರವಿಗೆ ಹೈಕೋರ್ಟ್ ನಿಂದ ಬಿಡುಗಡೆ ಆದೇಶ ಸಿಗುತ್ತಿದ್ದಂತೇ ಚಿಕ್ಕಮಗಳೂರಿನ ಅವರ ತವರಿನಲ್ಲಿ ಸಂಭ್ರಮ ಮನೆ ಮಾಡಿದೆ. ಬಿಜೆಪಿ ಸದಸ್ಯರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಸಿಟಿ ರವಿ ಕುಟುಂಬವೇ ಬೀದಿಗಿಳಿದು ಡ್ಯಾನ್ಸ್ ಮಾಡಿ ಸಂಭ್ರಮಿಸಿದೆ.

ಸಿಟಿ ರವಿ ಬಿಡುಗಡೆಯಾಗುತ್ತಿದ್ದಂತೇ ಪ್ರತಿಕ್ರಿಯಿಸಿದ ಅವರ ಪತ್ನಿ ಪಲ್ಲವಿ ನನ್ನ ಗಂಡ ಅಂತಹವರಲ್ಲ ಎನ್ನುವುದು ನನಗೆ ಚೆನ್ನಾಗಿ ಗೊತ್ತಿತ್ತು. ಅವರು ಯಾವತ್ತೂ ಮಹಿಳೆಯರ ಬಗ್ಗೆ ಅಂತಹ ಪದ ಪ್ರಯೋಗಿಸುವವರೇ ಅಲ್ಲ. ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ.

ಒಂದು ವೇಳೆ ಅವರು ಅಂತಹವರಾಗಿದ್ದರೆ ಅವರು ಬಂಧನವಾಗಿದ್ದಾರೆ ಎಂದು ತಿಳಿದಾಗಿನಿಂದ ಇಷ್ಟು ಜನ ನಮ್ಮ ಮನೆ ಮುಂದೆ ಬರುತ್ತಿರಲಿಲ್ಲ. ಅವರು ಅಂತಹವರಲ್ಲ ಎನ್ನುವುದಕ್ಕೆ ನಮ್ಮ ಮನೆ ಬಳಿ ಬಂದ ಮಹಿಳೆಯರೇ ಸಾಕ್ಷಿ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾ ವೀಸಾ ಪಡೆಯಲು ಇನ್ನು ಕಷ್ಟಪಡಬೇಕಾಗಿಲ್ಲ: ಕನ್ನಡಿಗರಿಗೆ ಗುಡ್ ನ್ಯೂಸ್