ಹಳಸಿದ ಹಾಗೂ ಹಸಿದವರ ಸರ್ಕಾರವಿದು: ಸಿಟಿ ರವಿ ಹೇಳಿಕೆ

Webdunia
ಸೋಮವಾರ, 4 ಜೂನ್ 2018 (19:37 IST)
ಜನಾದೇಶ ಕಳೆದುಕೊಂಡು ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಅಪವಿತ್ರ ಮೈತ್ರಿಯಿಂದ ಶಿಶು ಹುಟ್ಟಿದೆ. ಹಳಸಿದ ಹಾಗೂ ಹಸಿದವರ ಸರ್ಕಾರವಿದು ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಕಾಂಗ್ರೇಸೇತರ ಪಕ್ಷಗಳಿಗೆ ಮೋದಿ ಭಯ ಕಾಣ್ತಾ ಇದೆ ಈ ಕಾರಣಕ್ಕಾಗಿ ಮೋದಿ ವಿರುದ್ಧ ಅವು ಒಟ್ಟಾಗುತ್ತಿವೆ. ಹೇಗಾದರೂ ಮಾಡಿ ಮೋದಿಯವರನ್ನು ಸೋಲಿಸಬೇಕು. ಪಾಕ್ ಹಾಗೂ ಚೀನಾ ಹಾಗೂ ಇಲ್ಲಿಯ ರಾಜಕೀಯ ಪಕ್ಷಗಳ ಯೋಚನೆ ಒಂದೇ ರೀತಿ ಇದೆ ಎಂದು ತಿರುಗೇಟು ನೀಡಿದರು. 
 
ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡಲು ಒಂದು ಷಡ್ಯಂತರ ನಡೆದಿದೆ ಎಂದರು. ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲೂ ತುಂಡು ಗುಂಡು ಸಂಸ್ಕೃತಿ ಕಾಲಿಟ್ಟಿದೆ. ಚುನಾವಣೆಯಲ್ಲಿ ಬಹುಮತ ಸಿಗದ ವಿಚಾರವಾಗಿ ಹೇಳಿದ ಅವರು, ಇದಕ್ಕೆ ನಮ್ಮದೇ ಕೆಲವು ವೈಫಲ್ಯ ಕಾರಣ ಇದೆ ಎಂದರು. 
 
ಜಾತಿ ಸಮೀಕರಣಕ್ಕೆ ಜೋತು ಬಿದ್ದದ್ದು  ಹಾಗೂ ಆಂತರಿಕ ಭಿನ್ನತೆಯೂ ಕಾರಣ‌. ಈ ಕುರಿತು ವಿಸ್ಕೃತ ಸಮಾಲೋಚನೆ ಸಭೆ ನಡೆಸುತ್ತೇವೆ ಎಂದರು. 
 
ಉಡುಪಿ ದನದ ವ್ಯಾಪಾರಿ ಹುಸೇನಬ್ಬ ಹತ್ಯೆ ವಿಚಾರ ಪ್ರಸ್ತಾಪಿಸಿದ ಸಿ.ಟಿ‌.ರವಿ, ಯಾವುದೇ ರೀತಿಯ ಹತ್ಯೆಯನ್ನ ಬಿಜೆಪಿ ಬೆಂಬಲಿಸೋದಿಲ್ಲ. ಕಾನೂನು‌ಬಾಹಿರ ಚಟುವಟಿಕೆಯನ್ನೂ ಬೆಂಬಲಿಸೋದಿಲ್ಲ. ತನಿಖೆ ನಡೆಯಲಿ ಯಾರು ತಪ್ಪು ಮಾಡಿದ್ರೂ ಕ್ರಮ ಆಗಲಿ ಎಂದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೇ ಗುರುವಾರ, ಶುಕ್ರವಾರ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಗಲ್ಲ

ಬೆಳಗಾವಿ ಕೃಷ್ಣಮೃಗ ಸಾವು ಪ್ರಕರಣ, ಬಂತು ಪ್ರಯೋಗಾಲಯದ ವರದಿ

60 ಅಡಿ ಆಳದ ಕಾಲುವೆಗೆ ಬಿದ್ದ ಕಾಡಾನೆ, ಕಾರ್ಯಚರಣೆ ಹೇಗೆ ನಡೆದಿತ್ತು ಗೊತ್ತಾ

ಸಹಾಯ ಕೇಳಲು ಬಂದ ಯುವತಿಗೆ ಲೈಂಗಿಕ ದೌರ್ಜನ್ಯ, ಕೋರ್ಟ್‌ಗೆ ಹಾಜರಾಗಲು ಬಿಎಸ್‌ವೈಗೆ ಸಮನ್ಸ್‌

ಸೂಸೈಡ್ ಬಾಂಬರ್ ದಾರಿ ತಪ್ಪಿದ ಮಗ: ಕಾಂಗ್ರೆಸ್ ಸಂಸದನ ಹೇಳಿಕೆ ಕೇಳಿದ್ರೆ ಶಾಕ್

ಮುಂದಿನ ಸುದ್ದಿ
Show comments