ಬೆಂಗಳೂರು: ಮದ್ದೂರಿನಲ್ಲಿ ನಡೆದ ಗಣೇಶ ಮೆರವಣಿಗೆ ಮೇಲೆ ಅನ್ಯ ಕೋಮಿನವರಿಂದ ಕಲ್ಲು ತೂರಾಟದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಸಿಟಿ ರವಿ, ಸಿದ್ದರಾಮಯ್ಯನವರೇ ನಿಮ್ಮ ಶಾಂತಿದೂತರೇ ಈ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೊನ್ನೆಯಷ್ಟೇ ಅರಮನೆ ಮೈದಾನದಲ್ಲಿ ಈದ್ ಸಮಾವೇಶದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಇದನ್ನೇ ಇಟ್ಟುಕೊಂಡು ಸಿಟಿ ರವಿ ವ್ಯಂಗ್ಯ ಮಾಡಿದ್ದಾರೆ. ನೀವು ಎರಡು ದಿನದ ಹಿಂದೆ ಹಾಡಿ ಹೊಗಳಿದ “ಶಾಂತಿದೂತರು” ಮಂಡ್ಯದ ಮದ್ದೂರಿನಲ್ಲಿ ಗಣಪತಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಸಾಗರದಲ್ಲಿ ಗಣಪತಿಯ ವಿಗ್ರಹಕ್ಕೆ ಉಗುಳುವ ಹೀನ ಕೆಲಸ ಮಾಡಿದ್ದಾರೆ. ಜಾಗತಿಕ ಭಯೋತ್ಪಾದನೆಗೆ ದೊಡ್ಡ ಕೊಡುಗೆ ಕೊಟ್ಟವರು, ನೀವು ಹೊಗಳಿದ ಶಾಂತಿದೂತರೆ. ಭರತಖಂಡದಲ್ಲಿ ಹಿಂದೂಗಳ ಮಾರಣಹೋಮಕ್ಕೆ ಕಾರಣರಾದವರು,ನೀವು ಹೊಗಳಿದ ಶಾಂತಿದೂತರೆ. ಭಾರತವನ್ನು ವಿಭಜಿಸುವ ಮೂಲಕ ಅಖಂಡ ಭಾರತವನ್ನು ತುಂಡರಿಸಿದವರು, ನೀವು ಹೊಗಳಿದ ಶಾಂತಿದೂತರೆ.
ಕಾಶ್ಮೀರದಲ್ಲಿ ಭಾರತದ ರಾಷ್ಟ್ರೀಯ ಲಾಂಛನ "ಅಶೋಕಚಕ್ರ"ವನ್ನು ಒಡೆದು ಹಾಕಿದವರು, ನೀವು ಹೊಗಳಿದ ಶಾಂತಿದೂತರೆ. ನೆನಪಿಡಿ , ಈ ನಿಮ್ಮ ಶಾಂತಿದೂತರನ್ನು ನಂಬಿಕೊಂಡಿದ್ದರೆ ಮುಂದೊಂದು ದಿನ ದೇಶದಲ್ಲಿ "ಸಂವಿಧಾನ"ದ ಬದಲಿಗೆ "ಷರಿಯಾ" ಆವರಿಸಿಕೊಂಡೀತು.
ರಾಷ್ಟ್ರಧ್ವಜ ಮತ್ತು ರಾಷ್ಟ್ರಲಾಂಛನವನ್ನು ಗೌರವಿಸಲಾರದವರು ಸಂವಿಧಾನವನ್ನು ಉಳಿಸಿಯಾರೆ? ಇನ್ನೆಷ್ಟು ದಿನ ಮತಗಳಿಕೆಗಾಗಿ ಸುಳ್ಳಿನ ಭರಾಟೆ? ಸತ್ಯ ಹೇಳಿ ಜನಜಾಗೃತಿ ಮೂಡಿಸಿ, ಆಗಲಾದರೂ ಜನರಿಗೆ ಶಾಂತಿದೂತರ ಹೀನಕೃತ್ಯ ಅರ್ಥವಾದೀತು; ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾದರೂ ಆದೀತು ಎಂದಿದ್ದಾರೆ.