Select Your Language

Notifications

webdunia
webdunia
webdunia
webdunia

ಸಿಟಿ ರವಿ ಕೇಸ್ ಸಿಐಡಿಗೆ: ಶಾಸಕ ಹೇಳಿದ್ದೇನು

CT Ravi

Krishnaveni K

ಬೆಂಗಳೂರು , ಮಂಗಳವಾರ, 24 ಡಿಸೆಂಬರ್ 2024 (11:17 IST)
ಬೆಂಗಳೂರು: ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅಶ್ಲೀಲ ಪದ ಪ್ರಯೋಗಿಸಿದ ಸಿಟಿ ರವಿ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಇದರ ಬಗ್ಗೆ ಸಿಟಿ ರವಿ ಹೇಳಿದ್ದೇನು ನೋಡಿ.

ಬೆಳಗಾವಿ ಅಧಿವೇಶನದಲ್ಲಿ ಅಂಬೇಡ್ಕರ್ ಗೆ ಅವಮಾನ ಪ್ರಕರಣದ ಬಗ್ಗೆ ಪ್ರತಿಭಟನೆ ಮಾಡುವಾಗ ಮೊದಲು ರಾಹುಲ್ ಗಾಂಧಿಗೆ ಸಿಟಿ ರವಿ ಡ್ರಗ್ ಅಡಿಕ್ಟ್ ಎಂದಿದ್ದು ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸಿಟ್ಟು ತರಿಸಿತ್ತು. ಇದಕ್ಕೆ ಅವರು ಸಿಟಿ ರವಿಗೆ ಕೊಲೆಗಾರ ಎಂದಿದ್ದರು.

ಇದರಿಂದ ಕೆರಳಿದ ಸಿಟಿ ರವಿ ಅಶ್ಲೀಲ ಪದ ಬಳಸಿ ಪ್ರತಿಕ್ರಿಯಿಸಿದ್ದಾರೆ ಎಂಬುದು ಆರೋಪವಾಗಿದೆ. ಪ್ರಕರಣ ಸಂಬಂಧ ಬೆಳಗಾವಿ ಪೊಲೀಸರು ಸಿಟಿ ರವಿಯವರನ್ನು ಬಂಧಿಸಿ ಬಳಿಕ ಹೈಕೋರ್ಟ್ ನಿರ್ದೇಶನದ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಂಧಿಸಿದ ಬಳಿಕ ಸಿಟಿ ರವಿಯವರ ಜೊತೆ ಪೊಲೀಸರು ನಡೆದುಕೊಂಡ ರೀತಿ ವಿವಾದಕ್ಕೆ ಕಾರಣವಾಗಿತ್ತು.

ಇದೀಗ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಟಿ ರವಿ ಸಿಐಡಿಗೆ ವಹಿಸಿರುವ ವಿಚಾರದ ಬಗ್ಗೆ ನನಗಿನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಒಂದು ವೇಳೆ ಸಿಐಡಿಗೆ ವಹಿಸಿದ್ದೇ ಆದರೆ ಈ ಘಟನೆಯಲ್ಲಿ ಅನ್ಯಾಯ ಆಗಿರುವ ನನಗೂ ನ್ಯಾಯ ಸಿಗಬೇಕು. ನನ್ನನ್ನು ತಪ್ಪಾಗಿ ನಡೆಸಿಕೊಂಡವರಿಗೂ ಶಿಕ್ಷೆಯಾಗಬೇಕು ಎಂದು ಸಿಟಿ ರವಿ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಟಿ ರವಿಯನ್ನು ರಾತ್ರಿಯಿಡೀ ಪೊಲೀಸರು ಸುತ್ತಾಡಿಸಿದ್ದು ಈ ಕಾರಣಕ್ಕಂತೆ