Select Your Language

Notifications

webdunia
webdunia
webdunia
webdunia

ಎದೆ ಸೀಳಿದ್ರೆ ಮೂರು ಅಕ್ಷರ ಇಲ್ಲದ ಮುಲ್ಲಾಗಳಿಗೂ ನೀಟ್ ಪ್ರತಿಭಟನೆಗೂ ಏನು ಸಂಬಂಧ: ಸಿಟಿ ರವಿ ವಿವಾದ

CT Ravi
ಬೆಂಗಳೂರು: ಎದೆ ಸೀಳಿದ್ರೂ ಮೂರು ಅಕ್ಷರ ಇಲ್ಲದ ಮುಲ್ಲಾಗಳಿಗೂ ನೀಟ್ ಪ್ರತಿಭಟನೆಗೂ ಏನು ಸಂಬಂಧ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದೆಹಲಿಯ ಪ್ರತಿಭಟನೆಯಲ್ಲಿ ಮುಸ್ಲಿಂ ಸಮುದಾಯದ ಯುವಕರು ಪಾಲ್ಗೊಂಡಿರುವ ಬಗ್ಗೆ ಸಿಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿದ್ಯಾರ್ಥಿಗಳೇ ಅಲ್ಲದವರು ಪಾಲ್ಗೊಂಡಿದ್ದಾರೆ ಎನ್ನಲು ಹೋಗಿ ಧರ್ಮದ ವಿಚಾರ ತಂದು ವಿವಾದ ಸೃಷ್ಟಿಸಿದ್ದಾರೆ.

ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಎನು ಸಂಬಂಧ? ಮುಲ್ಲಾಗಳ ಎದೆ ಸೀಳದರೆ ಮೂರು ಅಕ್ಷರ ಇಲ್ಲ. ಆತ ಬಂದು ನೀಟ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದರೆ ಏನರ್ಥ? ಪ್ರತಿಭಟನೆಗೆ ಬಂದು ಮುಲ್ಲಾಗಳು ಮೋದಿ ಹಟಾವೋ ಅಂತಾರೆ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೇಳ್ತಾರೆ. ಸಿಎಎಗೂ, ಎನ್ ಆರ್ ಸಿಗೂ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೂ ಏನು ಸಂಬಂಧ?

ಭಾರತವನ್ನು ತುಂಡರಿಸುತ್ತೇವೆ ಎನ್ನುವ ತುಕ್ಡೇ ಗ್ಯಾಂಗ್ ಗಳು ಅಲ್ಲಿ ಬಂದು ಮಾತನಾಡುತ್ತವೆ. ತುಕ್ಡೇ ಗ್ಯಾಂಗ್ ಗಳು ಯಾರು ಎಂದು ನಿಮಗೆ ಗೊತ್ತಲ್ಲ? ಎಂದು ಸಿಟಿ ರವಿ ಭಾಷಣ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನದ ಮದುವೆಯಲ್ಲಿ ಜಸ್ಪ್ರೀತ್ ಬುಮ್ರಾ ಓಡಾಡ್ತಿದ್ರಾ... ವಿಡಿಯೋ ಹಿಂದಿರುವ ಅಸಲಿ ಕಹಾನಿ ಇಲ್ಲಿದೆ Video