Publish Date: Sat, 18 Nov 2023 (16:46 IST)
Updated Date: Sat, 18 Nov 2023 (18:21 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಕಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸಲಹೆಯ ಮೇರೆಗೆ ತಮ್ಮ ಪುತ್ರನ ಕಾಸಿಗಾಗಿ ಹುದ್ದೆ ವಿಡಿಯೋ ವಿವಾದಕ್ಕೆ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಅನುದಾನದ ಸ್ವರೂಪ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪವನ್ನು ಮಾಡಿದ್ದಾರೆ.
ಪೊಲೀಸ್ ಇಲಾಖೆ 71 ಮಂದಿ ಪೊಲೀಸ್ ಇನ್ಸ್‌ಪೆಕ್ಟರ್ ವರ್ಗಾವಣೆ ಪಟ್ಟಿಯಲ್ಲಿ ವಿವೇಕಾನಂದ ಅವರ ಹೆಸರು ಕಾಣಿಸಿಕೊಂಡಿದೆ. ರಾಜ್ಯ ಗುಪ್ತ ವಾರ್ತೆಯಿಂದ ಮೈಸೂರಿನ ವಿವಿ ಪುರಂ ಪೊಲೀಸ್ ಸ್ಟೇಷನ್ ಗೆ ವಿವೇಕಾನಂದ ವರ್ಗಾವಣೆ ಆಗಿದ್ದಾರೆ. ಯತೀಂದ್ರ ವಿಡಿಯೋದಲ್ಲಿ ಹೇಳಿರುವ ಹೆಸರು ಇವರದೇ ಎಂದಿರುವ ಕುಮಾರಸ್ವಾಮಿ, 'ಕಾಸಿಗಾಗಿ ಹುದ್ದೆ & ಕಾಂಗ್ರೆಸ್ ಹುಂಡಿ' ಸಿನಿಮಾ ಮಾಡಿ ಎಂದು ಕಾಂಗ್ರೆಸ್ಗೆ ತಿವಿದಿದ್ದಾರೆ.