Publish Date: Fri, 27 Jan 2023 (14:21 IST)
Updated Date: Fri, 27 Jan 2023 (14:27 IST)
74 ನೇ ಗಣರಾಜ್ಯೋತ್ಸವ ಹಿನ್ನೆಲೆ ಬೆಂಗಳೂರು ಫ್ಲವರ್ ಶೋ ಗೆ ಜನಸಾಗರ ಹರಿದು ಬಂದಿದೆ.ನೆನ್ನೆ ನಡೆದಂತಹ ಗಣರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರು ಹಾಗೂ ಹೊರ ಭಾಗದಿಂದ ಜನಸಾಗರ ಹರಿದು ಬಂದಿದ್ದು,ನೆನ್ನೆ 66,631 ಜನರಿಂದ ಪ್ಲವರ್ ಶೋ ವೀಕ್ಷಣೆ ನಡೆದಿದೆ.59,108 ವಯಸ್ಕರು ಸೇರಿದಂತೆ 7,523 ಮಕ್ಕಳು ಫ್ಲವರ್ ಶೋ ವೀಕ್ಷಣೆ ಮಾಡಿದ್ದಾರೆ.
ಇನ್ನೂ ಒಂದೇ ದಿನ ಒಟ್ಟು 46,58,540 ರೂಪಾಯಿ ಸಂಗ್ರಹವಾಗಿದೆ.ಇನ್ನೂ ಮೂರು ದಿನ ಫಲ ಪುಷ್ಪ ಪ್ರದರ್ಶನ ನಡೆಯಲಿದೆ.ಶನಿವಾರ ಹಾಗೂ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದೆ.