Publish Date: Sat, 23 Dec 2023 (14:00 IST)
Updated Date: Sat, 23 Dec 2023 (14:15 IST)
ವೈಕುಂಠ ಏಕಾದಶಿ ಹಿನ್ನೆಲೆ ವೆಂಕಟೇಶ್ವರ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ.ಗೋವಿಂದ... ಗೋವಿಂದ ನಾಮಸ್ಮರಣೆ ಕೇಳಿಬಂದಿದೆ.ವೈಯಾಲಿಕಾವಲ್ ಟಿಟಿಡಿ ದೇವಸ್ಥಾನದಲ್ಲಿ ವೆಂಕಟೇಶ್ವರನ ದರ್ಶನಕ್ಕೆ ಸಹಸ್ರಾರು ಭಕ್ತರು ನಿಂತಿದ್ದಾರೆ.
ಏಕಾದಶಿ ಹಿನ್ನೆಲೆ ಉಪವಾಸದಲ್ಲಿಯೇ ಬಂದು ಭಕ್ತರು ದೇವರ ಮೊರೆಹೋಗಿದ್ದಾರೆ.ಮುಂಜಾನೆಯಿಂದಲೇ ದೇವರ ದರ್ಶನಕ್ಕೆ ಸಹಸ್ರಾರು ಭಕ್ತರು ಆಗಮಿಸುತ್ತಿದ್ದಾರೆ.