Select Your Language

Notifications

webdunia
webdunia
webdunia
webdunia

ಮೈಸೂರು ಒಡೆಯರ್‌ ಯದುವೀರ್ -ತ್ರಿಷಿಕಾ ದಂಪತಿಯ ಎರಡನೇ ಪುತ್ರನಿಗೆ ತೊಟ್ಟಿಲು ಶಾಸ್ತ್ರ

Yaduveer Krishnadatta Chamaraja Wodeyar

Sampriya

ಮೈಸೂರು , ಬುಧವಾರ, 11 ಡಿಸೆಂಬರ್ 2024 (14:15 IST)
Photo Courtesy X
ಮೈಸೂರು:  ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ದಂಪತಿಗೆ ಎರಡನೇ ಗಂಡು 2017ರ ಡಿಸೆಂಬರ್ 6 ರಂದು ಜನಿಸಿತ್ತು. ಇದೀಗ ಪುತ್ರನಿಗೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ‌ ದೇವಸ್ಥಾನದಲ್ಲಿ ತೊಟ್ಟಿಲು ಶಾಸ್ತ್ರ ನೆರವೇರಿಸಲಾಗಿದೆ.

ಮೈಸೂರು- ಕೊಡಗು ಸಂಸದರೂ ಆಗಿರುವ ಯದುವೀರ್  ಒಡೆಯರ್, ತ್ರಿಷಿಕಾ ದೇವಿ ದಂಪತಿಯ ಕಿರಿಯ ಪುತ್ರನಿಗೆ ತೊಟ್ಟಿಲುಶಾಸ್ತ್ರವು ಆಪ್ತರ ಮಧ್ಯೆ ಸಂಭ್ರಮ ನೆರವೇರಸಲಾಗಿದೆ. ಇದಕ್ಕೂ ಮೊದಲು ರಾಜವಂಶಸ್ಥರು ಚಾಮುಂಡಿದೇವಿಗೆ ವಿಶೇಷ ಪೂಜೆ ನೆರವೇರಿಸಿದರು.

ದೇವಿಗೆ ಪೂಜೆ ಕಾರ್ಯಗಳೆಲ್ಲ ಮುಗಿದ ಮೇಲೆ ಚಾಮುಂಡಿಬೆಟ್ಟದಲ್ಲಿ ದೇವಾಲಯದ ಬಳಿ ಇರುವ ಸಂಪಿಗೆ ಮರಕ್ಕೆ ತೊಟ್ಟಿಲು ಕಟ್ಟಿ ಪೂಜೆ ಮಾಡಲಾಯಿತು. ಇದಾದ ಮೇಲೆ ತೊಟ್ಟಿಲು ಶಾಸ್ತ್ರ ಮಾಡಲಾಯಿತು. ಈ ವೇಳೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಉಪಸ್ಥಿತರಿದ್ದರು.

ವಿಶ್ವವಿಖ್ಯಾತ ದಸರಾ ಸಂದರ್ಭದಲ್ಲೇ ಯದುವೀರ್‌- ತ್ರಿಷಿಕಾ ದಂಪತಿಯು ಎರಡನೇ ಮಗುವನ್ನು ಬರಮಾಡಿಕೊಂಡಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಎರಡನೇ ಮಗುವಿಗೆ ಜನ್ಮ ನೀಡಿದ್ದರು.

ಯುವರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ತ್ರಿಷಿಕಾ ಕುಮಾರಿ ಅವರನ್ನು 2016ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಆದ್ಯವೀರ್‌ ಎಂದು ನಾಮಕರಣ ಮಾಡಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಯುಸಿರೆಳೆಯುವ ಮುನ್ನ ಎಸ್ಎಂ ಕೃಷ್ಣ ಕರೆ ಮಾಡಿದ್ದು ಇವರಿಗೆ