Webdunia - Bharat's app for daily news and videos

Install App

ತಂದೆಯೇ ಅಭ್ಯರ್ಥಿಯಾದರೂ ಮತದಾನವನ್ನೇ ಮಾಡದ ಸಿಪಿ ಯೋಗೇಶ್ವರ್ ಪುತ್ರಿ ನಿಶಾ: ಕಾರಣ ಶಾಕಿಂಗ್

Sampriya
ಬುಧವಾರ, 13 ನವೆಂಬರ್ 2024 (15:27 IST)
Photo Courtesy X
ಮಂಡ್ಯ: ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಬರದಿಂದ ಸಾಗುತ್ತಿದ್ದು, ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಕ್ಷೇತ್ರಗಳಲ್ಲಿ ಮತದಾರರು ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.  ಇದೀಗ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಸಿಎಸ್‌ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ನಾನು ಮತದಾನ ಮಾಡಲ್ಲ ಎಂದು ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.

 ಮೊದಲಿನಿಂದಲೂ ನಿಶಾ ಯೋಗೇಶ್ವರ್, ತನ್ನ ತಂದೆ ಸಿ.ಪಿ.ಯೋಗೇಶ್ವರ್ ವಿರುದ್ಧ ಆರೋಪಗಳನ್ನು ಮಾಡುತ್ತಲ್ಲೇ ಬಂದಿದ್ದಾರೆ. ಈಚೆಗೆ ತನ್ನ ತಂದೆ ವಿರುದ್ಧ ಸಿಡಿದೆದ್ದಿದ್ದು, ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿದ್ದರು. ತಂದೆಯಿಂದ ತನಗೆ ಅನ್ಯಾಯವಾಗುತ್ತಿದೆ ಎಂದು ವಿಡಿಯೋ ಮಾಡಿ ಹಂಚಿಕೊಂಡಿದ್ದರು.

ಇದೀಗ ನಿಶಾ ಅವರು ಮೂಲಭೂತ ಹಕ್ಕುಗಳನ್ನೇ ನನ್ನಿಂದ ಕಿತ್ತುಕೊಂಡಿರುವಾಗ ಇನ್ನು ಯಾವ ಹಕ್ಕಿಗಾಗಿ ನಾನು ಮತದಾನ ಮಾಡಲಿ ಎಂದು ಅಸಮಾಧಾನ ಹೊರಹಾಕಿದ್ದದಾರೆ.

ಚಕ್ಕರೆ ಗ್ರಾಮದಲ್ಲಿ ಮತದಾನದ ಹಕ್ಕು ಹೊಂದಿರುವ ನಿಶಾ ಯೋಗೇಶ್ವರ್, ಚಕ್ಕರೆಯಲ್ಲಿ ಮತ ಚಲಾಯಿಸಬೇಕಿತ್ತು. ಆದರೆ ಸುದ್ದಿಗಾರರೊಂದಿಗೆ ಮಾತನಾಡಿರುವ ನಿಶಾ, ತಾನು ಮತದಾನ ಮಾಡಲ್ಲ. ನನ್ನ ಎಲ್ಲಾ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ,. ಮೂಲಭೂತ ಹಕ್ಕುಗಳನ್ನೇ ನನ್ನಿಂದ ಕಿತ್ತುಕೊಂಡಿರುವಾಗ ಇನ್ನು ಯಾವ ಹಕ್ಕಿಗಾಗಿ ನಾನು ಮತದಾನ ಮಾಡಲಿ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎರಡುಮೂರು ದಿನಗಳಿಂದ ನನ್ನ ಫೇಸ್ ಬುಕ್, ಇನ್ ಸ್ಟಾಗ್ರಾಂ ಪೇಜ್ ಗಳನ್ನು ಹ್ಯಾಕ್ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳನ್ನು ಡಿಸ್ ಕನೆಕ್ಟ್ ಮಾಡಿಸಿದ್ದಾರೆ. ನಾನು ಯಾರನ್ನೂ ಸಂಪರ್ಕ ಮಾಡಲು ಆಗುತ್ತಿಲ್ಲ ಎಂದಿದ್ದಾರೆ. ನನಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆ. ಆದರೆ ಕೆಲ ವ್ಯಕ್ತಿಗಳ ಮೇಲೆ ನಂಬಿಕೆ ಇಲ್ಲ ಎಂದು ತಂದೆ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತವನ್ನು ನಿಂದಿಸಿದ ಡೊನಾಲ್ಡ್ ಟ್ರಂಪ್ ಮಾತು ಕೇಳಿದ್ರೆ ರೊಚ್ಚಿಗೇಳ್ತೀರಿ

ಗಾರ್ಡನ್ ಸಿಟಿಯನ್ನ ಜಿಹಾದಿ ಸಿಟಿ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ: ಆರ್ ಅಶೋಕ್

Gold Price: ಪರಿಶುದ್ಧ ಚಿನ್ನದ ದರ ಇಂದು ಮತ್ತೆ ಬಲು ದುಬಾರಿ

ರಷ್ಯಾ ಉಕ್ರೇನ್ ಯುದ್ಧವಾದರೂ ನಿಲ್ಲಬಹುದು ಕಾಂಗ್ರೆಸ್ ಜಗಳ ನಿಲ್ಲಲ್ಲ: ವಿಜಯೇಂದ್ರ ಟಾಂಗ್

ಸಕ್ಸಸ್ ಸಿಗಬೇಕೆಂದರೆ ಏನು ಮಾಡಬೇಕು, ಇನ್ಫೋಸಿಸ್ ನಾರಾಯಣ ಮೂರ್ತಿ ಸಲಹೆಯೇನು

ಮುಂದಿನ ಸುದ್ದಿ
Show comments