COVID19: ಲಾಕ್ ಡೌನೂ ಬೇಡ, ಶಾಲೆಗೆ ರಜಾನೂ ಬೇಡಪ್ಪಾ..

Krishnaveni K
ಮಂಗಳವಾರ, 27 ಮೇ 2025 (10:17 IST)
Photo Credit: X
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಜನ ಲಾಖ್ ಡೌನೂ ಬೇಡ, ಶಾಲೆಗೆ ರಜಾನೂ ಬೇಡ ಎಂದು ಮನವಿ ಮಾಡುತ್ತಿದ್ದಾರೆ.

ಕಳೆದ ಬಾರ ಕೊರೋನಾದಿಂದ ಜನ ಸಾಕಷ್ಟು ಅನುಭವಿಸಿದ್ದಾರೆ. ಕೊರೋನಾ ಒಂದು ಮತ್ತು ಎರಡನೇ ಅಲೆಯಲ್ಲಿ ಲಾಕ್ ಡೌನ್ ಆಗಿ ಮಾಡಲು ಕೆಲಸವೂ ಇಲ್ಲದೇ ಜನ ಜೀವನ ನಿರ್ವಹಣೆ ಮುಂದೆ ಹೇಗೆ ಎಂದು ಪರಿತಪಡಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯ ಏನಾಗುವುದೋ ಎಂಬ ಆತಂಕಕ್ಕೀಡಾಗಿದ್ದಾರೆ.

ಹೀಗಾಗಿ ಈಗ ಕೊರೋನಾ ಮತ್ತೊಂದು ಅಲೆ ಬರುತ್ತಿರುವ ಸೂಚನೆ ಬೆನ್ನಲ್ಲೇ ಸಾರ್ವಜನಿಕರು ಸೋಷಿಯಲ್ ಮೀಡಿಯಾದಲ್ಲಿ ಲಾಕ್ ಡೌನೂ ಬೇಡ, ಶಾಲೆಗಳಿಗೆ ರಜೆಯೂ ಬೇಡ ಎನ್ನುತ್ತಿದ್ದಾರೆ.  ಲಾಕ್ ಡೌನ್ ಎಂದು ಕಚೇರಿ, ಅಂಗಡಿ ಮುಂಗಟ್ಟುಗಳನ್ನು ಬಾಗಿಲು ಹಾಕಿ ಕೂತರೆ ಜೀವನ ನಿರ್ವಹಣೆ ಕಷ್ಟ. ಈಗಷ್ಟೇ ಹಳೆಯ ಕೊರೋನಾದಿಂದ ಚೇತರಿಸಿಕೊಂಡು ಮತ್ತೆ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಈಗ ಲಾಕ್ ಡೌನ್ ಎಂದು ಕೂತರೆ ಜೀವನ ಬರ್ಬಾದ್ ಆಗೋದು ಗ್ಯಾರಂಟಿ ಎನ್ನುತ್ತಿದ್ದಾರೆ.

ಇನ್ನು, ಕೊರೋನಾ ಸಮಯದಲ್ಲಿ ವಿದ್ಯಾಭ್ಯಾಸದ ನಿರ್ಣಾಯಕ ಹಂತದಲ್ಲಿದ್ದ ಎಷ್ಟೋ ವಿದ್ಯಾರ್ಥಿಗಳಿಗೆ ಈಗಲೂ ಕೊರೋನಾ ಬ್ಯಾಚ್ ಎನ್ನುವ ಕಾರಣಕ್ಕೆ ಉದ್ಯೋಗ ಸಿಗದೇ ಪರದಾಡುತ್ತಿರುವವರೂ ಇದ್ದಾರೆ. ಅಂತಹ ಪರಿಸ್ಥಿತಿ ಮತ್ತೆ ಬರದಿರಲಿ ಎಂದು ವಿದ್ಯಾರ್ಥಿಗಳು, ಪೋಷಕರೂ ಆತಂಕದಿಂದ ಬೇಡಿಕೊಳ್ಳುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾತ್ರಿ ಡ್ಯೂಟಿಯಲ್ಲಿದ್ದ ಪೊಲೀಸರ ಮೇಲೆ ದಾಳಿ, ಇಬ್ಬರು ಅರೆಸ್ಟ್‌

ನಿಂತಿದ್ದ ಲಾರಿಗೆ ಬೊಲೆರೋ ಡಿಕ್ಕಿ, ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವು

ನಾಳೆ ಸಿದ್ದರಾಮಯ್ಯ ರಾಜೀನಾಮೆ ವದಂತಿ: ಸಿಎಂ ನಿವಾಸದ ಬಳಿ ಶಾಸಕರು, ಸಚಿರ ದೌಡು

ಬಕ್ರೀದ್‌ ಹಬ್ಬ: ಗೋಹತ್ಯೆ, ಅಕ್ರಮ ಮಾಂಸ ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಎಬೋಲಾ ಪ್ರಕರಣದ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಸಚಿವ ದಿನೇಶ್ ಗುಂಡೂರಾವ್‌

ಮುಂದಿನ ಸುದ್ದಿ
Show comments