Publish Date: Sun, 10 Oct 2021 (17:21 IST)
Updated Date: Sun, 10 Oct 2021 (17:22 IST)
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 18,166 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 214 ಸಾವುಗಳು ವರದಿಯಾಗಿದೆ, ಇದೇ ಅವಧಿಯಲ್ಲಿ 23,624 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕಳೆದ 214 ದಿನಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಪ್ರಕರಣಗಳು ಇಂದು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳಿಂದ ಗೊತ್ತಾಗಿದೆ.
ಭಾನುವಾರದ ಅಂಕಿಅಂಶಗಳು ಭಾರತದ ಕೊರೊನಾ ವೈರಸ್ ಸಾವಿನ ಸಂಖ್ಯೆಯನ್ನು 4,50,589 ಕ್ಕೆ ಏರಿಸಿದೆ.
ಭಾರತದಲ್ಲಿ ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣವು ಶೇಕಡಾ 97.99 ಆಗಿದ್ದು, ಈ ವರೆಗೆ ಒಟ್ಟು 3,32,71,915 ಮಂದಿ ಗುಣಮುಖರಾಗಿದ್ದಾರೆ.
ದೇಶದಲ್ಲಿ ಸದ್ಯ 2,30,971 ಸಕ್ರಿಯ ಪ್ರಕರಣಗಳಿವೆ.
ರಾಷ್ಟ್ರೀಯ ರೋಗನಿರೋಧಕ ಅಭಿಯಾನದ ಅಡಿಯಲ್ಲಿ ಸರ್ಕಾರವು ಇದುವರೆಗೆ 94.70 ಕೋಟಿ ಡೋಸ್ ಕೋವಿಡ್ -19 ಲಸಿಕೆಗಳನ್ನು ನೀಡಿದೆ.