ರಾಜ್ಯಕ್ಕೆ ಮೂರನೇ ಅಲೆ ಬಾರದಂತೆ ತಡೆಯಬೇಕಿದೆ: ಸಚಿವ ಸುಧಾಕರ್

Webdunia
ಸೋಮವಾರ, 30 ಆಗಸ್ಟ್ 2021 (14:38 IST)
ರಾಜ್ಯಕ್ಕೆ ಕೊರೊನಾ ಮೂರನೇ ಅಲೆ ಇನ್ನೂ ಕಾಲಿಟ್ಟಿಲ್ಲ. ಅದು ಬಾರದಂತೆ ತಡೆಯಬೇಕಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಸುಧಾಕರ್ ಹೇಳಿ
ದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಶೇ. 27.1ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಶೀಘ್ರದಲ್ಲೇ ಎರಡು ಡೋಜ್ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡುವಂತೆ ಬಿಜೆಪಿ ಮುಖಂಡರೇ ಒತ್ತಡ ಹೇರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಧಾರ್ಮಿಕ ಸಾಮರಸ್ಯ ಇರಬೇಕು. ಯಾವುದೇ ಹಬ್ಬಗಳಿಗೆ ಸರ್ಕಾರದ ವಿರೋಧವಿಲ್ಲ. ಎಲ್ಲರ ಹಿತವನ್ನ ಸರ್ಕಾರ ಕಾಪಾಡಬೇಕು. ಪರಿಸ್ಥಿತಿ ಈಗ ಸರಿಯಿಲ್ಲ ಎಂದು ಅವರು ಹೇಳಿದರು.
ನಾವೇ ಕೊರೊನಾ ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನ ಮಾಡಿಕೊಂಡಿದ್ದೇವೆ. ಆ ಮಾರ್ಗಸೂಚಿಗಳನ್ನ ನಾವೇ ಪಾಲನೆ ಮಾಡಬೇಕು. ಜನಾಶೀರ್ವಾದ ಯಾತ್ರೆಯಲ್ಲಿ‌ ಜನ ಸೇರಬಾರದೆಂದು ನಾವು‌ ಹೇಳಿದ್ದೆವು. ಚುನಾವಣಾ ಆಯೋಗಕ್ಕೂ ಮನವಿ‌ ಮಾಡಿದ್ದೆವು. ಚುನಾವಣೆ ಸದ್ಯಕ್ಕೆ ಬೇಡ ಮುಂದೂಡಿ ಎಂದಿದ್ದೆವು. ಆದರೆ ಆಯೋಗ ಜವಾಬ್ದಾರಿಯನ್ನ ಹಾಕಿದೆ ಏನು ಮಾಡುವುದು ಎಂದು ಸುಧಾಕರ್ ಮರು ಪ್ರಶ್ನಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನಗೆ ಅದ್ಧೂರಿ ಬದುಕ ಬೇಡ, ಕನಿಷ್ಠ ಭದ್ರತೆ ಸಾಕೆಂದ ಕೇರಳದ ನೂತನ ಸಿಎಂ ಸತೀಶನ್

ಪ್ರಧಾನಿ ಮೋದಿ ಏನೇ ಮಾಡಿದ್ರೂ ಅಂಧ ಭಕ್ತರು ಸಂತೋಷ ಪಡ್ತಾರೆ: ಸಚಿವ ಸುಧಾಕರ್

ವಾಡಿಕೆಗಿಂತ ಆರು ದಿನ ಮುಂಚಿತವಾಗಿ ಮಾನ್ಸೂನ್ ಕೇರಳಕ್ಕೆ, ಇಲ್ಲಿದೆ ಮಾಹಿತಿ

ಶಿವಮೊಗ್ಗದಲ್ಲಿ ಒಂದೇ ಮೈದಾನದಲ್ಲಿ 5ಸಾವಿರ ಕ್ರಿಕೆಟ್ ಪಂದ್ಯ ವೀಕ್ಷಿಸಬಹುದು

ವಿಜಯ್‌ಗೆ ಕರೆ ಮಾಡಿ ನಿಮ್ಮ ಜತೆ ನಾವಿದ್ದೇವೆಂದ ಡಿಕೆ ಶಿವಕುಮಾರ್‌, Video

ಮುಂದಿನ ಸುದ್ದಿ
Show comments