Publish Date: Mon, 30 Aug 2021 (14:02 IST)
Updated Date: Mon, 30 Aug 2021 (12:40 IST)
ಕಾಸರಗೋಡು: ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇರಳದಲ್ಲಿ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆ ತನಕ ಕರ್ಫ್ಯೂ ಜಾರಿಯಲ್ಲಿರಲಿದೆ. ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ವ್ಯಾಪಾರ ಮಳಿಗೆಗಳು ರಾತ್ರಿ 10 ಗಂಟೆ ಮೊದಲು ಮುಚ್ಚಬೇಕು. ಅನಗತ್ಯವಾಗಿ ಒಡಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಪೊಲೀಸ್ ತಪಾಸಣೆ ತೀವ್ರ ಗೊಳಿಸಲು ತೀರ್ಮಾನಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Ramya kosira
Publish Date: Mon, 30 Aug 2021 (14:02 IST)
Updated Date: Mon, 30 Aug 2021 (12:40 IST)