ನವದೆಹಲಿ(ಜು.26): ಕೋವಿಡ್ನಿಂದಾಗಿ ಸುದೀರ್ಘ ಅವಧಿಗೆ ಶಾಲೆಗಳು ಮುಚ್ಚಲ್ಪಟ್ಟಕಾರಣ, ದೇಶಾದ್ಯಂತ ಬಹುತೇಕಖಾಸಗಿ ಶಾಲೆಗಳು ಶೇ.20-50ರವರೆಗೆ ಆದಾಯ ಕೊರತೆ ಎದುರಿಸಿವೆ. ಇದರ ಪರಿಣಾಮ ಶಿಕ್ಷಕರ ಮೇಲೂ ಉಂಟಾಗಿದ್ದು,ಹಲವು ಶಿಕ್ಷಕರ ವೇತನವು ಕಡಿತಗೊಂಡಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
* ಶೇ.55ರಷ್ಟು ಶಿಕ್ಷಕರಿಗೆ ವೇತನ ಕಡಿತ: ಸಿಎಸ್ಎಫ್ ಅಧ್ಯಯನ ವರದಿ
* ಕೋವಿಡ್ ಪರಿಣಾಮ: ಶಾಲೆಗಳ ಆದಾಯ ಶೇ.20-50 ಕುಸಿತ
* 20 ರಾಜ್ಯಗಳ ಶಿಕ್ಷಕರು ಪೋಷಕರ ಅಭಿಪ್ರಾಯ ಸಂಗ್ರಹಿಸಿ ಅಧ್ಯಯನ
ಸೆಂಟ್ರಲ್ ಸ್ವೇ್ಕರ್ ಫೌಂಡೇಷನ್ ಎಂಬ ಎನ್ಜಿಒ 20 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಶಾಲೆ, ಶಿಕ್ಷಕರು ಮತ್ತು ಪೋಷಕರನ್ನು ಮಾತನಾಡಿಸಿ ವರದಿಯೊಂದನ್ನು ತಯಾರಿಸಿದೆ.
ವರದಿಯಲ್ಲಿನ ಪ್ರಮುಖ ಅಂಶಗಳು ಹೀಗಿವೆ.
- ಪ್ರಸಕ್ತ ಹಣಕಾಸು ವರ್ಷದಲ್ಲಿ ಮಕ್ಕಳ ದಾಖಲಾತಿಯಲ್ಲಿ ದೊಡ್ಡ ಪ್ರಮಾಣದ ಇಳಿಕೆಯಾಗಿದೆ ಎಂದು ಶೇ.55ರಷ್ಟುಶಾಲೆಗಳು ಹೇಳಿವೆ.
- ಶೇ.75ರಷ್ಟುಶಾಲೆಗಳು ಆರ್ಟಿಐ ಕಾಯ್ದೆಯಡಿ ಮಕ್ಕಳನ್ನು ನೋಂದಣಿ ಮಾಡಿಕೊಂಡಿದ್ದಕ್ಕೆ ಸರ್ಕಾರದಿಂದ ಬರಬೇಕಾದ ಹಣ ಪಾವತಿಯಲ್ಲಿ ವಿಳಂಬವಾಗಿದೆ ಎಂದಿವೆ.
- ವೆಚ್ಚ ಬಹುತೇಕ ಹಿಂದಿನಂತೇ ಇದ್ದರೂ ಬಹುತೇಕ ಶಾಲೆಗಳು ಶೇ.20-50ರಷ್ಟುಆದಾಯ ಇಳಿಕೆಯಾಗಿದೆ ಎಂದಿವೆ. ಇದು ಅನಿಯಮತಿವಾಗಿ ಶಾಲೆ ಮುಂದುವರೆಸಲು ಅಡ್ಡಿಯಾಗಿವೆ ಎಂದಿವೆ. ಈ ಪ್ರಮಾಣ ನಗರ ಪ್ರದೇಶಗಳಲ್ಲಿ ಹೆಚ್ಚಿದೆ.
- ಶಾಲೆಯ ಹಣಕಾಸು ವೆಚ್ಚವನ್ನು ನಿರ್ವಹಿಸಲು ಸಾಲ ಪಡೆಯುವ ಆಸಕ್ತಿ ಹೊಂದಿಲ್ಲ ಎಂದು ಶೇ.77ರಷ್ಟುಶಾಲೆಗಳು ಹೇಳಿವೆ. ಶೇ.3ರಷ್ಟುಶಾಲೆಗಳು ಮಾತ್ರವೇ ಸಾಲದ ವ್ಯವಸ್ಥೆ ಮಾಡಿಕೊಂಡಿವೆ. ಶೇ.5ರಷ್ಟುಶಾಲೆಗಳು ಸಾಲ ಪಡೆಯುವ ಹಂತದಲ್ಲಿವೆ ಎಂದಿವೆ.
- ಬಹುತೇಕ ಶಾಲೆಗಳು ಸರ್ಕಾರಿ ಬ್ಯಾಂಕ್ಗಳಿಂದ ಸಾಲ ಪಡೆಯುವ ಉದ್ದೇಶ ಹೊಂದಿವೆ.
- ಶೇ.55ರಷ್ಟುಶಿಕ್ಷಕರು ತಮ್ಮ ವೇತನದಲ್ಲಿ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.
- ವೆಚ್ಚ ನಿರ್ವಹಿಸಲಾಗದೆ ಬಹುತೇಕ ಶಾಲೆಗಳು ಶಿಕ್ಷಕರಿಗೆ ಭಾಗಶಃ ವೇತನ ನೀಡಿವೆ. ಕಡಿಮೆ ಶುಲ್ಕದ ಶಾಲೆಗಳಲ್ಲಿ ಶೇ.65ರಷ್ಟುಶಿಕ್ಷಕತ ವೇತನವನ್ನು ತಡೆಹಿಡಿಯಲಾಗಿದೆ. ಹೆಚ್ಚಿನ ಶುಲ್ಕದ ಶಾಲೆಗಳಲ್ಲಿ ಈ ಪ್ರಮಾಣ ಶೇ.37ರಷ್ಟಿದೆ.
- ಶೇ.54ರಷ್ಟು ಶಿಕ್ಷಕರು ತಮಗೆ ವೇತನದ ಹೊರತಾಗಿ ಬೇರೆ ಆದಾಯದ ಮೂಲ ಇಲ್ಲ ಎಂದಿದ್ದಾರೆ. ಶೇ.30ರಷ್ಟುಶಿಕ್ಷಕರು ವೇತನದ ನಷ್ಟವನ್ನು ಖಾಸಗಿ ಟ್ಯೂಷನ್ ಮೊದಲಾದ ಸಂಗತಿಗಳ ಮೂಲಕ ತುಂಬಿಕೊಳ್ಳುವ ಯತ್ನ ಮಾಡುತ್ತಿರುವುದಾಗಿ ಹೇಳಿದ್ದಾರೆ.
- ಶೇ.55ರಷ್ಟುಶಿಕ್ಷಕರು, ಪರಿಸ್ಥಿತಿ ತಿಳಿಯಾದ ಬಳಿಕ ಮತ್ತೆ ಶಾಲೆಗಳು ಯಥಾಸ್ಥಿತಿಗೆ ಮರಳುವ ವಿಶ್ವಾಸ ಹೊಂದಿದ್ದಾರೆ. ಈ ವಿಶ್ವಾಸ ನಗರ ಪ್ರದೇಶಗಳ ಶಿಕ್ಷಕರಲ್ಲಿ ಹೆಚ್ಚಿದ್ದರೆ, ಗ್ರಾಮೀಣ ಪ್ರದೇಶಗಳ ಶಿಕ್ಷಕರಲ್ಲಿ ಕಡಿಮೆ ಇದೆ.
- ಶೇ.70ರಷ್ಟುಶಿಕ್ಷಕರು, ಕೋವಿಡ್ ಹೊರತಾಗಿಯೂ ಶುಲ್ಕದ ಪ್ರಮಾಣ ಹಿಂದಿನಂತೆಯೇ ಇದೆ ಎಂದಿದ್ದಾರೆ. ಶೇ.50ರಷ್ಟುಶಿಕ್ಷಕರು ಮಾತ್ರ ಶುಲ್ಕ ಪಾವತಿಸಿದ್ದಾಗಿ ಹೇಳಿದ್ದಾರೆ.
- ಆನ್ಲೈನ್ ತರಗತಿಗಳಿಂದಾಗಿ ವೆಚ್ಚ ಹೆಚ್ಚಿದೆ ಎಂದು ಶೇ.25ರಷ್ಟುಪೋಷಕರು ಹೇಳಿದ್ದಾರೆ. ಶೇ.78ರಷ್ಟುಪೋಷಕರು ಹಿಂದಿನ ಶಾಲೆಗಳಲ್ಲೇ ಮಕ್ಕಳನ್ನು ಮುಂದುವರೆಸುವ ಸಾಮರ್ಥ್ಯ ಹೊಂದಿದ್ದಾಗಿ ಹೇಳಿದ್ದಾರೆ