ಪ್ರಶ್ನೆ : ಸರ್, ನನಗೆ 25 ವರ್ಷಗಳು. ಕೆಲವು ತಿಂಗಳುಗಳಿಂದ ನಾನು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ. ನಾನೊಬ್ಬ ಕಬಡ್ಡಿ ಆಟಗಾರನಾಗಿದ್ದು, ನಾನು ದೀರ್ಘಕಾಲದವರೆಗೆ ಅಭ್ಯಾಸ ಮಾಡುತ್ತೇನೆ.
ಆದರೆ ಇತ್ತೀಚೆಗೆ ನನಗೆ ಅಭ್ಯಾಸ ಮಾಡುವಾಗ ತುಂಬಾ ಸುಸ್ತಾಗುತ್ತದೆ. ನಾನು ಮಾಡಿಕೊಳ್ಳುತ್ತಿರುವ ಹಸ್ತಮೈಥುನದಿಂದ ಈ ರೀತಿ ಆಗುತ್ತದೆಯೇ? ಗುಪ್ತಾಂಗ ಹಿಡಿದು ಅಲ್ಲಾಡಿಸೋದ್ರಿಂದ ಕೈ ನೋವು ಜಾಸ್ತಿಯಾಗಿದೆ.
ಉತ್ತರ: ಹಸ್ತ ಮೈಥುನಕ್ಕೆ ನಿಮ್ಮ ಕೈ ನೋವಿಗೂ ಕೊಂಚವೂ ಸಂಬಂಧ ಇಲ್ಲ. ಹಸ್ತಮೈಥುನ ಸುರಕ್ಷಿತ ಹಾಗೂ ನೀವು ಪ್ರಸ್ತಾಪಿಸಿದ ಸಮಸ್ಯೆಗಳಿಂದ ಮುಕ್ತವಾಗಿದೆ. ಈ ಸಮಸ್ಯೆಗೆ ಕಾರಣವನ್ನು ತಿಳಿಯಲು ನಿಮ್ಮ ಕುಟುಂಬದ ವೈದ್ಯರನ್ನು ಭೇಟಿ ಮಾಡಿ.
ನಿಮ್ಮ ಶಕ್ತಿಯನ್ನು ಮರಳಿಪಡೆಯಲು ಬೇಕಾದ ಸಲಹೆಯನ್ನು ಅವರು ನೀಡುತ್ತಾರೆ. ದೇಹದ ಅನಾರೋಗ್ಯ ಹಾಗೂ ಒತ್ತಡದ ಕೆಲಸಗಳು ನಿಮ್ಮ ಈಗಿನ ಪರಿಸ್ಥಿತಿಗೆ ಕಾರಣವಾಗಿರಬಹುದು. ಕೂಡಲೇ ವೈದ್ಯರನ್ನು ಕಂಡು ಸಲಹೆ ಪಡೆದುಕೊಳ್ಳಿ.