Publish Date: Sat, 07 Dec 2019 (19:50 IST)
Updated Date: Sat, 07 Dec 2019 (19:51 IST)
17 ವರ್ಷದ ಹುಡುಗಿಯೊಬ್ಬಳು ಆರು ತಿಂಗಳಲ್ಲಿ ಎರಡು ಬಾರಿ ನಾಲ್ವರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಅಮಾನವೀಯ ಘಟನೆ ನಡೆದಿದೆ.
ಹರ್ಯಾಣದ ಫಲ್ವಾಲ ಗ್ರಾಮದಲ್ಲಿ ಘಟನೆ ನಡೆದಿದ್ದು, 17 ವರ್ಷದ ಯುವತಿಯನ್ನು ಕಳೆದ ಆಗಸ್ಟ್ ನಲ್ಲಿ ನಾಲ್ವರು ದುಷ್ಕರ್ಮಿಗಳು ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು.
ಆ ಬಳಿಕ ಡಿ. 4 ರಂದು ಅದೇ ಕಾಮುಕರು ಮತ್ತೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಪೊಲೀಸರು ತನಿಖೆ ಕೈಗೊಂಡಿದ್ದಾರೆ.