Publish Date: Tue, 03 Dec 2019 (16:08 IST)
Updated Date: Tue, 03 Dec 2019 (16:10 IST)
ಗಂಡ-ಹೆಂಡತಿಯನ್ನು ಕೊಲೆ ಮಾಡಿದ್ದ ಕಿರಾತಕನೊಬ್ಬ ಮಹಿಳೆ ಸತ್ತರೂ ಆಕೆಯ ಶವದ ಜೊತೆಗೆ ಮೂರ್ನಾಲ್ಕು ಗಂಟೆ ಸತತವಾಗಿ ಅತ್ಯಾಚಾರ ನಡೆಸಿರೋ ಅಮಾನವೀಯ ಘಟನೆ ನಡೆದಿದೆ.
ಲಕ್ನೋದಲ್ಲಿ ಘಟನೆ ನಡೆದಿದ್ದು, ಮುಬಾರಕ್ ಪುರದಲ್ಲಿ ದಂಪತಿಯನ್ನು ವಿಕೃತ ಕಾಮಿ ನಾಸಿರುದ್ದೀನ್ ಕೊಲೆ ಮಾಡಿದ್ದಾನೆ. ಆ ಬಳಿಕ ಮಹಿಳೆಯ ಶವದ ಮೇಲೆ ಅತ್ಯಾಚಾರ ನಡೆಸಿದ್ದಾನೆ.
ಅಷ್ಟೇ ಅಲ್ಲ ಅವರ 10 ವರ್ಷದ ಹೆಣ್ಣು ಮಗಳ ಮೇಲೂ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಇನ್ನೊಬ್ಬ ಪುಟ್ಟ ಮಗನನ್ನೂ ಕಲ್ಲಿನಿಂದ ಹಾಗೂ ಚಾಕುವಿನಿಂದ ತಿವಿದು ಹತ್ಯೆ ಮಾಡಿದ್ದಾನೆ.
ಸಧ್ಯ ಸೈಕೋನನ್ನು ಪೊಲೀಸರು ಬಂಧನ ಮಾಡಿದ್ದಾರೆ. ತನಿಖೆ ತೀವ್ರಗೊಳಿಸಿದ್ದಾರೆ.