೪೦% ಕಮಿಷನ್ ಬಹಿರಂಗವಾಗಿ ಆರೋಗ್ಯ ಇಲಾಖೆಯಲ್ಲಿ ನಡೆಯುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು ಭ್ರಷ್ಟಾಚಾರದ ಸೊಂಕು ಆರೋಗ್ಯ ಇಲಾಖೆಗೆ ತಟ್ಟಿದೆ.೪೦% ಕಮಿಷನ್ ಬಹಿರಂಗವಾಗಿ ಈ ಇಲಾಖೆಯಲ್ಲಿ ನಡೆಯುತ್ತಿದೆ. ಜಗದೀಶ್ ಶೆಟ್ಟರ್ ಅವರು ಮೊನ್ನೆ ವಿಚಾರ ಎತ್ತಿದ್ರು. ವೈದ್ಯಕೀಯ ಶಿಕ್ಷಣಕ್ಕೆ ಟೀಚಿಂಗ್ ಸ್ಟಾಪ್ ಇಲ್ಲ. ಧಾರವಾಡ ಹಾಗೂ ಹಾವೇರಿ ಭಾಗದ ಸಮಸ್ಯೆ ಎತ್ತಿದ್ರು. ಮಿನಿಮಮ್ ಸ್ಟಾಪ್ ಇರಬೇಕು ಅಂತ ರೂಲ್ಸ್ ಇದೆ.ನ್ಯಾಷನಲ್ ಮೆಡಿಕಲ್ ಸೈನ್ಸ್ ರೂಲ್ಸ್ ಇದೆ.ನವೆಂಬರ್ ನಲ್ಲಿ ಕ್ಲಾಸ್ ಆಗಿದ್ದಾವೆ.ಆದ್ರೂ ಕೂಡ ಟೀಚಿಂಗ್ ಸ್ಟಾಪ್ ನೇಮಕ ಆಗಿಲ್ಲ.ದುಡ್ಡು ಕೊಡದೆ ಯಾವುದೆ ನೇಮಕ ಆಗುತ್ತಿಲ್ಲ.ಈ ವಿಚಾರ ನಾವು ಹೇಳಿದ್ದಲ್ಲ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದು ಎಂದು ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು