Publish Date: Wed, 22 Feb 2023 (11:40 IST)
Updated Date: Wed, 22 Feb 2023 (11:26 IST)
ಬೆಂಗಳೂರು : ಕರ್ನಾಟಕದಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾಗಿರುವ ಕರ್ನಾಟಕವೂ ಸೇರಿದಂತೆ ಪ್ರಾದೇಶಿಕ ಭಾಷೆಗಳನ್ನು ಹಲವು ಸುದ್ದಿ ಸಂಸ್ಥೆಗಳನ್ನು ಹೊಂದಿರುವ ಮಹತ್ವ ಬೆಳವಣಿಗೆಯೊಂದು ನಡೆದಿದೆ.
ಸಂಸ್ಥೆಯ ನೂತನ ಸಿಇಓ ಆಗಿ ಬರನ್ ದಾಸ್ ನೇಮಕವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ದೊಡ್ಡಮಟ್ಟದ ಆಡಳಿತಾತ್ಮಕ ಬದಲಾವಣೆಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಸಮೂಹಕ್ಕೆ ಹಂಗಾಮಿ ಸಿಇಓ ಆಗಿದ್ದ ಕರ್ನಾಟಕ ಟಿವಿ 9 ಮುಖ್ಯಸ್ಥ ಮಹೇಂದ್ರ ಮಿಶ್ರಾ ನೇಮಕಗೊಂಡಿದ್ದರು.
ಇದೀಗ ಆಡಳಿತ ಮಂಡಳಿ ಮಿಶ್ರಾರನ್ನು ಪ್ರಧಾನ ಸಲಹೆಗಾರರನ್ನಾಗಿ ನೇಮಕ ಮಾಡಿದ್ದಲ್ಲದೆ, ಅವರ ಜಾಗಕ್ಕೆ ಪೂರ್ಣಾವಧಿ ಸಿಇಓ ಆಗಿ ಬರನ್ ದಾಸ್ರನ್ನು ನೇಮಕ ಮಾಡಿದೆ.
ಐಐಟಿ ಮದ್ರಾಸ್, ಐಐಎಂ ಕೋಲ್ಕತ್ತಾ, ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ನಲ್ಲಿ ಅಧ್ಯಯನ ಮಾಡಿರುವ ಬರನ್ ದಾಸ್ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 25 ವರ್ಷಗಳ ಅನುಭವ ಹೊಂದಿದ್ದಾರೆ. ಕಳೆದ 5 ವರ್ಷಗಳಿಂದ ಅವರು ಝೀ ಮೀಡಿಯಾ ಸಿಇಒ ಆಗಿದ್ದರು.
ramya kosira
Publish Date: Wed, 22 Feb 2023 (11:40 IST)
Updated Date: Wed, 22 Feb 2023 (11:26 IST)