ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ನೇಮಕ ವಿಚಾರವಾಗಿ ಸದಾಶಿವನಗರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಖಂಡಿತಾ ಫೈನಲ್ ಮಾಡಿಕೊಂಡೆ ಬರ್ತೇವೆ.ಪಟ್ಟಿಯನ್ನ ಹೈಕಮಾಂಡ್‌ಗೆ ಕಳುಹಿಸಿಕೊಟ್ಟಿದ್ವಿ.ಪಂಚರಾಜ್ಯಗಳ ಚುನಾವಣೆಯಿಂದ ತಡವಾಗಿತ್ತು.ಇವತ್ತು ದೆಹಲಿಗೆ ಹೋಗಿ ಕೂತು ಚರ್ಚೆ ಮಾಡಿ ಫೈನಲ್ ಮಾಡ್ತೀವಿ.ಸಿಡಬ್ಲ್ಯೂಸಿ ಮೀಟಿಂಗ್ ಎರಡು ಕಡೆ ಇದೆ ಡೆಲ್ಲಿಲೂ ಇದೆ, ನಾಗಪೂರ್‌ನಲ್ಲೂ ಇದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.