Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಇಲ್ಲಾ ಅಂದಿದ್ರೆ 2 ಲಕ್ಷ ಜನರಲ್ಲಿ ಕೊರೊನಾ ವೈರಸ್

ಲಾಕ್ ಡೌನ್ ಇಲ್ಲಾ ಅಂದಿದ್ರೆ 2 ಲಕ್ಷ ಜನರಲ್ಲಿ ಕೊರೊನಾ ವೈರಸ್
ನವದೆಹಲಿ , ಶನಿವಾರ, 11 ಏಪ್ರಿಲ್ 2020 (18:43 IST)
ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿ ಮಾಡದೇ ಇದ್ದಿದ್ದರೆ ಈ ಹೊತ್ತಿಗಾಗಲೇ 2 ಲಕ್ಷ ಜನರಲ್ಲಿ ಕೋವಿಡ್ – 19 ವೈರಾಣು ಇರುತ್ತಿತ್ತು. ಹೀಗೊಂದು ಭಯಂಕರ ಸತ್ಯವನ್ನು ಆರೋಗ್ಯ ಸಚಿವಾಲಯ ಹೇಳಿದೆ.
 

ದೇಶದಲ್ಲಿ ಕೋವಿಡ್ – 19 ನಿಯಂತ್ರಣಕ್ಕೆ ಲಾಕ್ ಡೌನ್ ಪರಿಣಾಮಕಾರಿಯಾಗಿದೆ. ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಇಷ್ಟೋತ್ತಿಗಾಗಲೇ 2 ಲಕ್ಷ ಜನರಲ್ಲಿ ಕೊರೊನಾ ಸೋಂಕು ತಗುಲುತ್ತಿತ್ತು ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ 40 ಜನರು ಕೊರೊನಾದಿಂದ ದೇಶದ ವಿವಿಧೆಡೆ ಮೃತಪಟ್ಟಿದ್ದಾರೆ. 1035 ಜನರಲ್ಲಿ ಪಾಸಿಟಿವ್ ವರದಿ ಬಂದಿದ್ದು, ಇಲ್ಲಿಯತನಕ 239 ಮಂದಿ ಸಾವನ್ನಪ್ಪಿದಂತಾಗಿದೆ ಎಂದು ಮಾಹಿತಿ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ಇಲಾಖೆಯಲ್ಲಿ ನೇರ ನೇಮಕಾತಿ