Publish Date: Sat, 30 May 2020 (20:32 IST)
Updated Date: Sat, 30 May 2020 (20:34 IST)
ಕೆಎಸ್ ಆರ್ ಪಿ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸಟೇಬಲ್ ವೊಬ್ಬರಲ್ಲಿ ಕೊರೊನಾ ಕೇಸ್ ಪತ್ತೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಗ್ರಾಮವೊಂದರ ಕೆಎಸ್‍ಆರ್‍ಪಿ ನಲ್ಲಿ ಕಾರ್ಯ ನಿರ್ವಹಿಸುವ 27 ವರ್ಷದ ಪೇದೆಗೆ (ಪಿ-2831) ಕೋವಿಡ್ -19 ಸೋಂಕು ತಗುಲಿರುವುದು ದೃಢಪಟ್ಟಿದೆ.
ಹಾಸನದ ಕೆಎಸ್‍ಆರ್‍ಪಿ ಬೆಟಾಲಿಯನ್‍ನಲ್ಲಿ ಕಾನ್ಸಟೇಬಲ್ ಆಗಿರುವ 27 ವರ್ಷದ ವ್ಯಕ್ತಿ ಬೆಂಗಳೂರಿನಲ್ಲಿ ಸೋಂಕು ಪೀಡಿತ ಪ್ರದೇಶವಾಗಿರುವ ಅತ್ತಿಬೆಲೆ ಚೆಕ್‍ಪೋಸ್ಟ್‍ನಲ್ಲಿ ಮೇ 07 ರಿಂದ 17 ರವರೆಗೆ ಕರ್ತವ್ಯ ನಿರ್ವಹಿಸಿರುವ ಬಗ್ಗೆ ಮಾಹಿತಿ ಇದೆ.
ಇವರು ಮೇ 25 ರಂದು ಸ್ವಂತ ಗ್ರಾಮಕ್ಕೆ ಬಂದು ಹೋಂ ಕ್ವಾರಂಟೈನ್‍ನಲ್ಲಿ ಇದ್ದರು. ಮೇ 25 ರಂದೇ ಆರೋಗ್ಯ ಇಲಾಖೆಯಿಂದ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಇದೀಗ ಪ್ರಯೋಗಾಲಯ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ.
Jagadeesh
Publish Date: Sat, 30 May 2020 (20:32 IST)
Updated Date: Sat, 30 May 2020 (20:34 IST)