ಬೆಂಗಳೂರು: ಕೊರೋನಾವೈರಸ್ ಹರಡುವಿಕೆ ತಡೆಯಲು ಸರ್ಕಾರ ನಗರವನ್ನು ಲಾಕ್ ಡೌನ್ ಮಾಡುವ ನಿರ್ಧಾರ ಮಾಡಿದೆ. ಆದರೆ ಇದರಿಂದಾಗಿ ದಿನಗೂಲಿ ಮಾಡುವವರಿಗೆ ತೊಂದರೆಯಾಗುತ್ತಿದೆ.ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ಕೊರೋನಾದಿಂದ ಪ್ರಯಾಣಿಕರಿಲ್ಲದೇ ಆಟೋ ಓಡಿಸಲಾಗದೇ ಹಣಕಾಸಿನ ಮುಗ್ಗಟ್ಟಿನಿಂದಾಗಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.ಶಿವಕುಮಾರ್ ಎಂಬ ಚಾಲಕ 4 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಇದೀಗ ಆಟೋ ಓಡಿಸಲೂ ಆಗದೇ ಸಾಲ ತೀರಿಸಲೂ ಆಗದೇ ಸಂಕಷ್ಟಕ್ಕೆ ಸಿಲುಕಿದ್ದ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.