Webdunia - Bharat's app for daily news and videos

Install App

ನಮ್ಮೂರ ತಿಂಡಿ ಹೋಟೆಲ್ ಉದ್ದಿಮೆಯನ್ನು ಮುಚ್ಚಿರುವ ಬಗ್ಗೆ

Webdunia
ಮಂಗಳವಾರ, 3 ಆಗಸ್ಟ್ 2021 (20:25 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜರಾಜೇಶ್ವರಿನಗರ ವಲಯದ ಜ್ಞಾನಭಾರತಿ ವಾರ್ಡ್ನ ನಾಗರಭಾವಿ ಮುಖ್ಯರಸ್ತೆಯ ಎನ್.ಜಿ.ಎಫ್ ಬಡಾವಣೆಯಲ್ಲಿರುವ ನಮ್ಮೂರ ತಿಂಡಿ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಕೋವಿಡ್-19 ಪರೀಕ್ಷೆ ನಡೆಸಿದಾಗ ಒಬ್ಬ ವ್ಯಕ್ತಿಗೆ ಕೋವಿಡ್ ಸೋಂಕು ದೃಢಪಟ್ಟಿರುತ್ತದೆ. ಈ ಸಂಬಂಧ ಅವರನ್ನು ಸೂಕ್ತ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಯಿಸಲಾಗಿದ್ದು, ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ಕೋವಿಡ್-19 ಪರೀಕ್ಷೆ ನಡೆಸಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿರುತ್ತದೆ.
  
ಸದರಿ ಹೋಟೆಲ್‌ನಲ್ಲಿ ಸೋಂಕು ನಿವಾರಕ ಸಿಂಪಡಣೆ ಮಾಡಲಾಗಿದ್ದು, ಹೋಟೆಲ್‌ನ್ನು ಮುಚ್ಚಲಾಗಿರುತ್ತದೆ. ಉಳಿದ ಸಿಬ್ಬಂದಿಗಳ ಕೋವಿಡ್-19 ಪರೀಕ್ಷೆಯ ಫಲಿತಾಂಶ ಬಂದ ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು. ಅಲ್ಲದೆ ರಾಜರಾಜೇಶ್ವರಿನಗರ ವಲಯದಲ್ಲಿರುವ ಎಲ್ಲಾ ಹೋಟೆಲ್ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕೋವಿಡ್-19 ಪರೀಕ್ಷೆ ಮಾಡಿಸುವಂತೆ  ಮತ್ತು ಕೋವಿಡ್-19 ಲಸಿಕೆ ಹಾಕಿಸುವಂತೆ ವಲಯ ಆಯುಕ್ತರು ಶ್ರೀ ರೆಡ್ಡಿ ಶಂಕರ ಬಾಬು ರವರು ಹೋಟೆಲ್ ಮಾಲೀಕರಲ್ಲಿ ಈ ಮೂಲಕ ಮನವಿ ಮಾಡಿರುತ್ತಾರೆ.
hotel

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments