Publish Date: Thu, 02 Jul 2020 (18:59 IST)
Updated Date: Thu, 02 Jul 2020 (19:02 IST)
ಆ್ಯಂಬುಲೆನ್ಸ್ ಚಾಲಕನೊಬ್ಬ ತನಗೆ ಕೊರೊನಾ ಹರಡಿರಬಹುದು ಎಂದು ಭಾವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ದಿನೇಶ ಗೌಡ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆ್ಯಂಬುಲೆನ್ಸ್ ಚಾಲಕನಾಗಿದ್ದಾನೆ.
ನನ್ನಿಂದ ಕೊರೊನಾ ವೈರಸ್ ಎಲ್ಲಿ ಮನೆ ಮಂದಿಗೆ ಹರಡಿ ಬಿಡುತ್ತದೆಯೋ ಎಂದು ಆತಂಕಗೊಂಡ ಚಾಲಕ ನೀರಿಗೆ ಹಾರಿ ಪ್ರಾಣ ಬಿಟ್ಟಿದ್ದಾನೆ.
ರಾಜಸ್ಥಾನದಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.