Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವ ಆಂಧ್ರದ ಟೆಕ್ಕಿಯಲ್ಲಿ ಕೊರೊನಾ ಸೋಂಕು ಪತ್ತೆ

ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವ ಆಂಧ್ರದ ಟೆಕ್ಕಿಯಲ್ಲಿ  ಕೊರೊನಾ ಸೋಂಕು ಪತ್ತೆ
ಬೆಂಗಳೂರು , ಮಂಗಳವಾರ, 3 ಮಾರ್ಚ್ 2020 (10:20 IST)
ಬೆಂಗಳೂರು : ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವ ಆಂಧ್ರಪ್ರದೇಶದ ಮೂಲದ ಟೆಕ್ಕಿಗೆ  ಕೊರೊನಾ ವೈರಸ್ ತಗಲಿರುವುದಾಗಿ ತಿಳಿದುಬಂದಿದೆ.


ದುಬೈನಿಂದ ಬಂದ ಟೆಕ್ಕಿ 2 ದಿನ ಬೆಂಗಳೂರಿನ ಪಿಜಿಯಲ್ಲಿದ್ದ. ಬಳಿಕ ಬಸ್ ನಲ್ಲಿ ಹೈದರಾಬಾದ್ ಗೆ ತೆರಳಿದ್ದ  ವೇಳೆ ಆತನಿಗೆ ಜ್ವರ ಕಾಣಿಸಿಕೊಂಡ ಹಿನ್ನಲೆ ಅಪೋಲೊದಲ್ಲಿ ಪರಿಶೀಲಿಸಿದಾಗ ಸೋಂಕು ಪತ್ತೆಯಾಗಿತ್ತು. ಬಳಿಕ ಆತನನ್ನು ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.


ಇದೀಗ ಮುನ್ನೇಚ್ಚರಿಕೆ ಕ್ರಮವಾಗಿ  ಆತನ ಜತೆ ಪ್ರಯಾಣಿಸಿದ್ದ ಪ್ರಯಾಣಿಕರನ್ನು ಪತ್ತೆ ಮಾಡಿದ್ದು, ಅವರಿಗೆ ಯಾವುದೇ ರೀತಿಯ ಸಮಸ್ಯೆ ಕಾಣಿಸಿಲ್ಲ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಗಳನ್ನು ಕೊಂದು ತಾವೂ ನೇಣಿಗೆ ಶರಣಾದ ದಂಪತಿ