Publish Date: Fri, 27 Mar 2020 (19:52 IST)
Updated Date: Fri, 27 Mar 2020 (19:55 IST)
ಇಡೀ ದೇಶವೇ ಲಾಕ್ ಡೌನ್ ಆಗಿರೋವಾಗ ಕುಡಿತದ ದಾಸನಾಗಿದ್ದ ಯುವಕನೊಬ್ಬ ಮದ್ಯ ಸಿಗದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮದ್ಯ ದೊರಕದ ಕಾರಣದಿಂದಾಗಿ ತೀವ್ರವಾಗಿ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿ ಸನೋಜ್ (37) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಲ್ಲದೇ ಕುಡಿತದ ಚಟ ಅಂಟಿಸಿಕೊಂಡಿರುವ ಕೆಲವು ಯುವಕರು ಲಾಕ್ ಡೌನ್ ನಿಂದಾಗಿ ಮದ್ಯ ಸಿಗದ ಕಾರಣ ಖಿನ್ನತೆಗೆ ಒಳಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.
ಕೇರಳದ ತ್ರಿಸೂರ್ ಜಿಲ್ಲೆಯ ಕುನ್ನಾಕುಲಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ.