Select Your Language

Notifications

webdunia
webdunia
webdunia
webdunia

ಕೊರೊನಾ ಎಫೆಕ್ಟ್ : ಒಂದುವರೆ ಸಾವಿರ ಜೋಡಿಯ ವಿವಾಹ ಮುಂದೂಡಿಕೆ

webdunia
ಬೆಂಗಳೂರು , ಮಂಗಳವಾರ, 7 ಏಪ್ರಿಲ್ 2020 (16:21 IST)
ಕೊರೊನಾ ಎಫೆಕ್ಟ್ ನಿಂದಾಗಿ ಹೊಸ ಬಾಳಿಗೆ ಕಾಲಿಡಲು ಕಾತರಿಸುತ್ತಿದ್ದ ನವಜೋಡಿಗಳಿಗೆ ಬಿಗ್ ಶಾಕ್ ಕಾದಿದೆ.

ರಾಜ್ಯ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಸಪ್ತಪದಿ ಯೋಜನೆಯಲ್ಲಿ ನಡೆಯಬೇಕಿದ್ದ ಮದುವೆ ಕಾರ್ಯಕ್ರಮ ಮುಂದೂಡಲಾಗಿದೆ.

ಏಪ್ರಿಲ್ 26 ರಂದು ಮೊದಲ ಹಂತದ ಸಪ್ತಪದಿ ಸಮಾರಂಭವನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಒಂದು ಸಾವಿರದ ಐದನೂರು ವಧು ವರರು ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದರು. ಕೊರೊನಾದಿಂದಾಗಿ ಇದೀಗ ಮುಂದೂಡಿಕೆ ಮಾಡಲಾಗಿದೆ ಎಂದಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಕಲಬುರಗಿಯಲ್ಲಿ ಮತ್ತೆ‌ ಇಬ್ಬರಿಗೆ ಕೊರೋನಾ ಪಾಸಿಟಿವ್