Select Your Language

Notifications

webdunia
webdunia
webdunia
webdunia

ಕೊರೊನಾ ಎಫೆಕ್ಟ್ : ದಿನಸಿ ವಸ್ತುಗಳ ಕಿಟ್ ವಿತರಿಸಿದ ಮೆಂಬರ್

ಕೊರೊನಾ ಎಫೆಕ್ಟ್ : ದಿನಸಿ ವಸ್ತುಗಳ ಕಿಟ್ ವಿತರಿಸಿದ ಮೆಂಬರ್
ಕೊಪ್ಪಳ , ಗುರುವಾರ, 2 ಏಪ್ರಿಲ್ 2020 (19:36 IST)
ಕೊರೊನಾ ವೈರಸ್ ತಡೆಗೆ ಲಾಕ್ ಡೌನ್ ಮಾಡಿದ್ದರಿಂದಾಗಿ ಬಡ ಜನರಿಗೆ ಅನುಕೂಲವಾಗಲೆಂದು ಮೆಂಬರ್ ಮುಂದೆ ಬಂದಿದ್ದಾರೆ.

ಕೊಪ್ಪಳ ನಗರದ ವಾರ್ಡ್ ಸಂಖ್ಯೆ 15 ರಲ್ಲಿ ಕಡು ಬಡವರಾಗಿರುವ ಮಂಡಾಳ ಭಟ್ಟಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಪ್ಪಳ ನಗರ ಸಭೆಯ 15 ವಾರ್ಡಿನ ಸದಸ್ಯ ಚನ್ನಪ್ಪ ಕೊಟ್ಯಾಳ 6 ಲಕ್ಷ ರೂಪಾಯಿ ಕಿರಾಣಿ ಸಾಮಗ್ರಿಗಳನ್ನು ಖರೀದಿಸಿದ್ದಾರೆ. 15 ದಿನಸಿ ದಿನ ಬಳಕೆ ವಸ್ತುಗಳ ಕಿರಾಣಿ ಕಿಟ್ ತಯಾರಿಸಿ  6 ನೂರು ಕಡು ಬಡ ಕುಟುಂಬಗಳಿಗೆ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಕಳೆದ ಒಂದು ವಾರದಿಂದ ಜನರು ಮನೆಯಿಂದ ಹೋರಗೆ ಹೋಗದ ಪರಿಸ್ಥಿತಿ ಇದೆ. ನಾವು ಕೂಲಿ ಕೆಲಸ ಮಾಡಿ ಬದುಕು ನಡೆಸುವವರು ನಮಗೆ ಅಡುಗೆಗೆ ಬೇಕಾದ ತುರ್ತು ವಸ್ತುಗಳನ್ನು ನಮ್ಮ ವಾರ್ಡ್ ಮೆಂಬರು ನೀಡಿದ್ದಾರೆ. ಜೀವನಕ್ಕೆ ಇದು ಅನುಕೂಲವಾಗಿದೆ ಎಂದು ವಾರ್ಡಿನ ಜನರು ಹೇಳಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯ ತಬ್ಲಿಘಿ ಜಮಾತ್ ಸಭೆಗೆ ತೆರಳಿದ್ದ 19 ಮಂದಿ ಪತ್ತೆ