Publish Date: Thu, 02 Apr 2020 (19:01 IST)
Updated Date: Thu, 02 Apr 2020 (19:03 IST)
ಕೊರೊನಾ ಸೋಂಕಿತ ಮೂವರು ಆಸ್ಪತ್ರೆಗೆ ದಾಖಲಿಸುವ ಮುನ್ನ ಹಲವು ಜನರೊಂದಿಗೆ ಸಂಪರ್ಕ ಹೊಂದಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಮೊದಲನೆಯದಾಗಿ ಕೊರೋನಾ ಪಾಸಿಟಿವ್ ಆಗಿ ಕಂಡು ಬಂದಿರುವ ಹೊಸಪೇಟೆಯ ಮೂವರು ಆಸ್ಪತ್ರೆಗೆ ದಾಖಲಿಸುವ ಮುನ್ನ ಜನರೊಂದಿಗೆ ಸಂಪರ್ಕ ಹೊಂದಿದ್ದರು. ಈಗ ಅವರನ್ನು ಹುಡುಕಿ ತಪಾಸಣೆ ಮಾಡಿ ಹೋಮ್ ಕ್ವಾರಂಟೈನ್ ಮಾಡುವ ಕೆಲಸವನ್ನು ಜಿಲ್ಲಾಡಳಿತ ಮಾಡಿದೆ.
ಬೆಂಗಳೂರಿನಿಂದ ಬಂದ ನಂತರ ಅವರು ಮೊದಲ ಹಂತದಲ್ಲಿ 25, ಜನರೊಂದಿಗೆ ನಂತರ 2ನೇ ಹಂತದಲ್ಲಿ 125 ಜನರೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಅಂತಹವರನ್ನು ಈಗಾಗಲೇ ಎಲ್ಲರನ್ನೂ ಗುರುತಿಸಿ, ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹೇಳಿದ್ದಾರೆ.
ಸೋಂಕಿತರ ಕುಟುಂಬದ ಇತರೆ ನಾಲ್ವರಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದಿದ್ದು, ಅವರನ್ನೂ ಐಸೋಲೇಷನ್‍ನಲ್ಲಿ ಇಡಲಾಗಿದೆ.