Publish Date: Tue, 10 Mar 2020 (10:29 IST)
Updated Date: Tue, 10 Mar 2020 (10:31 IST)
ಕೋಲಾರ :ಕೋಳಿಗಳಿಗೆ ಕೊರೊನಾ ಸೋಂಕು ತಗಲಿರುವ ಅನುಮಾನ ವ್ಯಕ್ತವಾದ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಕೋಳಿಗಳನ್ನು ಸಾಯಿಸಿದ್ದಾಯ್ತು. ಇದೀಗ ಕೋಲಾರದಲ್ಲಿಯೂ ಕೋಳಿಗಳ ಮಾರಣಹೋಮ ನಡೆದಿದೆ.
ಇತ್ತೀಚೆಗೆ ಜನರಿಗೆ ಮಾರಕವಾಗಿದ್ದ ಕೊರೊನಾ ವೈರಸ್ ಕೋಳಿಗಳಿಗೂ ತಗಲಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಕೋಳಿ ಮಾಂಸ ತಿನ್ನವವರ ಸಂಖ್ಯೆ ಇಳಿಕೆಯಾದ ಕಾರಣ ಕೋಳಿ ಮಾಂಸದ ಬೆಲೆ ಕೂಡ ಇಳಿಕೆಯಾಗಿದೆ. ಆದಕಾರಣ ಈಗಾಗಲೇ ಅನೇಕ ಕೋಳಿಗಳ ಮಾರಣ ಹೋಮ ನಡೆದಿದೆ.
ಇದೀಗ ಕೋಲಾರ ಜಿಲ್ಲೆಯ ಬಂಗಾರಪೆಟೆ ತಾಲೂಕಿನ ಮಂಗೋದಯಲ್ಲಿ ಹೇಮಂತರೆಡ್ಡಿ ಎಂಬುವವರ ಫಾರಂನಲ್ಲಿದ್ದ 9,500 ಕೋಳಿಗಳನ್ನು ಸಾಯಿಸಲಾಗಿದೆ ಎನ್ನಲಾಗಿದೆ.