Select Your Language

Notifications

webdunia
webdunia
webdunia
webdunia

ಕೊರೊನಾ ಭೀತಿ : ಹೋಳಿ ಮಿಲನ್ ಆಚರಣೆ ಕೈ ಬಿಟ್ಟ ಶಾಸಕರು

ಕೊರೊನಾ ಭೀತಿ : ಹೋಳಿ ಮಿಲನ್ ಆಚರಣೆ ಕೈ ಬಿಟ್ಟ ಶಾಸಕರು
ಬೆಳಗಾವಿ , ಸೋಮವಾರ, 9 ಮಾರ್ಚ್ 2020 (18:08 IST)
ಹೋಳಿ ಹಾಗೂ ಬಣ್ಣದ ಓಕಳಿ ಹಬ್ಬವನ್ನು ಪ್ರತಿವರ್ಷ ಅದ್ದೂರಿ ಹಾಗೂ ತುಂಬಾ ಸಂಭ್ರಮ ಸಡಗರದ ಮಧ್ಯೆ ಆಚರಿಸುತ್ತ ಬರಲಾಗುತ್ತಿದ್ದು, ಈ ವರ್ಷ ಪ್ರತಿವರ್ಷದ ಸಂಭ್ರಮ ಅದ್ದರೂರಿಯ ರಂಗು ಕಳೆದುಕೊಂಡಿದೆ.

ಕೋವಿಡ್-19 ಸೋಂಕಿನ ಭೀತಿ ಬೆಳಗಾವಿಯಲ್ಲಿ ಆವರಿಸಿರುವುದರಿಂದ ಮತ್ತು ಜಿಲ್ಲಾ ಆಡಳಿತ ಇದೇ ಕಾರಣಕ್ಕೆ ಸರಳವಾಗಿ ಹಬ್ಬವನ್ನು ಆಚರಿಸಲು ಕರೆ ನೀಡಿರುವುದರಿಂದ ಅದ್ದೂರಿ ಆಚರಣೆಗೆ ತೆರೆಬಿದ್ದಿದೆ.

ಮಧ್ಯರಾತ್ರಿ ಕಾಮದಹನ ಹಾಗೂ ಮರುದಿನ ಓಕಳಿ ಬಣ್ಣದಾಟ ನಿಗದಿಯಾಗಿತ್ತಾದರೂ ಪ್ರಾಣಕ್ಕೆ ಮಾರಕವಾಗಬಲ್ಲ ಸೋಂಕಿನ ಭಯದಿಂದ ಸಾರ್ವಜನಿಕರು ಹಬ್ಬ ಆಚರಿಸಲು ಮುಂದೆ ಬರುತ್ತಿಲ್ಲ. ಬೆಳಗಾವಿ ಮಾರುಕಟ್ಟೆಯಲ್ಲಿ ಬಣ್ಣದಾಟದ ನಾನಾ ರೀತಿಯ ಪರಿಕರಗಳು ಬಂದಿವೆ. ಆದರೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿಲ್ಲ.

ಬೆಳಗಾವಿ ನಗರದ ಲೇಲೇ ಮೈದಾನದಲ್ಲಿ ಶಾಸಕ ಅಭಯ ಪಾಟೀಲ ಅವರು ಆಯೋಜಿಸುತ್ತದ ‘ಹೋಳಿ ಮಿಲನ್’  ಅದ್ದರಿಯ ಓಕಳಿ ಕಾರ್ಯಕ್ರಮ ನಡೆಯುತ್ತಿಲ್ಲ.

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಆಯೋಜಿಸುತ್ತಿದ್ದ ಬಣ್ಣದಾಟ ‘ವುಮೇನಿಯಾ’ ರದ್ದುಗೊಂಡಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಹೋಳಿ ಪಾರ್ಟಿ ಮಾಡಿ ಟೀಕೆಗೊಳಗಾದ ಅಂಬಾನಿ ಪುತ್ರಿ ಇಶಾ