Select Your Language

Notifications

webdunia
webdunia
webdunia
webdunia

ಅಡುಗೆ ಎಣ್ಣೆಯ ಬಲು ದುಬಾರಿ

Cooking oil is expensive
bangalore , ಮಂಗಳವಾರ, 8 ಮಾರ್ಚ್ 2022 (20:16 IST)
ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಪರೋಕ್ಷವಾಗಿ ದೇಶದ ಖಾದ್ಯ ತೈಲಮಾರುಕಟ್ಟೆ ಮೇಲೆ ಬೀರುತ್ತಿದೆ. ಅಡುಗೆ ಎಣ್ಣೆ ಬೆಲೆ ಗಗನಮುಖಿಯಾಗುತ್ತಿದ್ದು, ಅಡುಗೆ ಮನೆಗೂ ಯುದ್ಧದ ಬಿಸಿ ತಟ್ಟಲಾರಂಭಿಸಿದೆ.
 
ಸೂರ್ಯಕಾಂತಿ ರಷ್ಯಾ ಮತ್ತು ಉಕ್ರೇನ್‌ ದೇಶದ ಪ್ರಮುಖ ಬೆಳೆ. ಜಾಗತಿಕ ಮಾರುಕಟ್ಟೆಯಖಾದ್ಯ ತೈಲ ಪೂರೈಕೆಯಲ್ಲಿ ಪ್ರಮುಖದೇಶಗಳೆನಿಸಿವೆ. ಭಾರತದ ಮಾರುಕಟ್ಟೆಗೆ ಅಧಿಕಪ್ರಮಾಣದಲ್ಲಿ ಗುಣಮಟ್ಟದ ಸೂರ್ಯಕಾಂತಿ ಎಣ್ಣೆ ಉಕ್ರೇನ್‌, ರಷ್ಯಾದಿಂದ ಆಮದಾಗುತ್ತದೆ.ಯುದ್ಧದಿಂದಾಗಿ ಮಾರುಕಟ್ಟೆಗೆ ಅಡುಗೆ ಎಣ್ಣೆಆವಕ ಕಡಿಮೆಯಾಗುತ್ತಿದೆ. ಪರಿಣಾಮ ಬೆಲೆಏರಿಕೆಯಾಗುತ್ತಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸುತ್ತಿದೆ.
ಈ ಹಿಂದೆ ವಿವಿಧ ಮಾದರಿಯ ಸೂರ್ಯಕಾಂತಿ ಅಡುಗೆ ಎಣ್ಣೆ ಪ್ರತಿ ಲೀಟರ್‌ 129 ರೂ.ನಿಂದ 130ರೂ.ವರೆಗೂ ಮಾರಾಟವಾಗುತ್ತಿತ್ತು. ಯುದ್ಧಆರಂಭವಾದ ನಂತರ ಲೀ.ಗೆ 130 ರಿಂದ 180 ರೂ.ವರೆಗೂ ತಲುಪಿದೆ. ಪ್ರತಿ ಲೀಟರ್‌ ಬೆಲೆಯಲ್ಲಿಸುಮಾರು 40ರೂ. ಏರಿಕೆಯಾಗಿದೆ. ಪರಿಸ್ಥಿತಿ ಹೀಗೆಮುಂದುವರಿದರೆ ಪ್ರತಿ ಲೀ. 200 ರೂ. ದಾಟುವನಿರೀಕ್ಷೆಯಿದೆ ಎಂದು ಹೋಲ್‌ಸೇಲ್‌ ಅಡುಗೆ ಎಣ್ಣೆ ಮಾರಾಟಗಾರರು ಹೇಳುತ್ತಾರೆ.
 
40 ಸಾವಿರ ಮೆಟ್ರಿಕ್‌ ಟನ್‌: ಅಂದಾಜಿನ ಪ್ರಕಾರ ಕರ್ನಾಟಕಕ್ಕೆ ಪ್ರತಿ ತಿಂಗಳು ಸುಮಾರು 40 ಸಾವಿರಮೆಟ್ರಿಕ್‌ ಟನ್‌ ಸೂರ್ಯಕಾಂತಿ ಎಣ್ಣೆ ಉಕ್ರೇನ್‌ಸೇರಿ ಮತ್ತಿತರೆ ಕಡೆಗಳಿಂದ ಆಮದಾಗುತ್ತಿದೆ.ಇದರಲ್ಲಿ ಸನ್‌ಫ್ಯೂರ್‌ ಆಯಿಲ್‌ ಸುಮಾರು 15ಸಾವಿರ ಮೆಟ್ರಿಕ್‌ ಟನ್‌, ಗೋಲ್ಡ್‌ ವಿನ್ನರ್‌ 6ಸಾವಿರ ಮೆಟ್ರಿಕ್‌ ಟನ್‌ ಮತ್ತು ಫ್ರೀಡಂ ಆಯಿಲ್‌ಸುಮಾರು 5 ಸಾವಿರ ಮೆ.ಟ. ಖರೀದಿಯಾಗುತ್ತಿದೆಎಂದು ಬೆಂಗಳೂರಿನ ಅಡುಗೆ ಎಣ್ಣೆ ಹೋಲ್‌ಸೇಲ್‌ ವ್ಯಾಪಾರಿ ಬಿ.ಆರ್‌.ಅಶೋಕ್‌ಹೇಳುತ್ತಾರೆ.
ಪೇಚಿಗೆ ಸಿಲುಕಿದ ಗ್ರಾಹಕರು: ಇನ್ನು ಗದಗದ ಸಗಟು ಮಾರುಕಟ್ಟೆಯೊಂದರಲ್ಲೇ ಎರಡುವಾರದ ಹಿಂದೆ 15 ಲೀ.ನ ಫಾಮ್‌ ಎಣ್ಣೆ 1900ರೂ. ಇದ್ದು, ಈಗ 2400 ರೂ. ತಲುಪಿದೆ. 1480ರೂ. ಇದ್ದ 10 ಲೀಟರ್‌ ಸನ್‌ ಫ್ಲವರ್‌ ಈಗ 1760ರೂ. ಏರಿಕೆಯಾಗಿದೆ. ಸ್ವಲ್ಪ ದುಬಾರಿ ಎನಿಸಿದ ಜೆಮಿನಿ, ಸನ್‌ರಿಚ್‌, ಫ್ರೀಡಂ ಬೆಲೆಗಳಲ್ಲಿ 5-10 ರೂ. ಏರಿಕೆ ಕಂಡಿದೆ. ಪರಿಣಾಮ ಚಿಲ್ಲರೆಮಾರುಕಟ್ಟೆಯಲ್ಲೂ ಪ್ರತಿ ಲೀಟರ್‌ಗೆ 30 ರಿಂದ45 ರೂ. ವರೆಗೆ ಏರಿಕೆಯಾಗಿರುವುದು ಗ್ರಾಹಕರನ್ನು ಪೇಚಿಗೆ ಸಿಲುಕಿಸಿದೆ. ಈ ಬೆಳವಣಿಗೆಸಗಟು ಮತ್ತು ಚಿಲ್ಲರ ವ್ಯಾಪಾರಸ್ಥರನ್ನೂ ಇಕ್ಕಟ್ಟಿಗೆಸಿಲುಕಿಸಿದೆ. ಎಲ್ಲೆಡೆಯೂ ಇದೇ ಪರಿಸ್ಥಿತಿಎನ್ನುತ್ತಾರೆ ಗದುಗಿನ ಖಾದ್ಯ ತೈಲಗಳ ಡಿಸ್ಟ್ರಿಬ್ಯೂಟರ್‌  ಧೀರಜ್‌.
 
ಸೂರ್ಯಕಾಂತಿ ಅಡುಗೆ ಎಣ್ಣೆ ಪ್ರತಿ ಲೀ. ಬೆಲೆ ವ್ಯತ್ಯಾಸ :
 
ವಿವಿಧ ಮಾದರಿ ಎಣ್ಣೆ 15 ದಿನದ ಹಿಂದಿನ ದರ ಸೋಮವಾರದ ದರ
 
ಸನ್‌ ಫ್ಯೂರ್‌ ಆಯಿಲ್‌ 129 ರೂ. 170 ರೂ.
 
ಫ್ರೀಡಂ ಆಯಿಲ್‌ 129 ರೂ. 160 ರೂ.
 
ಗೋಲ್ಡ್‌ ವಿನ್ನರ್‌ 131 ರೂ. 170 ರೂ.
 
ಫಾರ್‌ಚ್ಯೂನ್‌ ಆಯಿಲ್‌ 130 ರೂ. 185 ರೂ.
 
ಜೆಮಿನಿ ಆಯಿಲ್‌ 130 ರೂ. 174 ರೂ.
 
ಇತ್ತೀಚೆಗೆ ಕಡಿಮೆಯಾಗಿದ್ದ ಅಡುಗೆ ಎಣ್ಣೆ ಬೆಲೆಗಳು ಮತ್ತೆ ಲೀಟರ್‌ಗೆ 30 ರೂ.ಏರಿಕೆಯಾಗಿದೆ. ಈ ಹಿಂದೆ 135 ರೂ.ಗೆದೊರೆಯುತ್ತಿದ್ದ ಸನ್‌ರಿಚ್‌ ಎಣ್ಣೆ ಇದೀಗ 179 ರೂ.ಗೆ ಖರೀದಿಸಿದ್ದೇವೆ. ಹೀಗಾದರೆ, ಜೀವನ ಸಾಗಿಸುವುದು ಹೇಗೆ ಎಂಬುದೇ ಚಿಂತೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಪ್ರಮುಖ ನಗರಗಳಲ್ಲಿ ಮಾರ್ಚ್ 8ರ ಇಂಧನ ದರ ಎಷ್ಟಾಗಿದೆ?