Select Your Language

Notifications

webdunia
webdunia
webdunia
webdunia

ಎಣ್ಣೆ ದರ ಏರಿಕೆ : ಕಂಡೀಷನ್ ಅಪ್ಲೈ!

ಎಣ್ಣೆ ದರ ಏರಿಕೆ : ಕಂಡೀಷನ್ ಅಪ್ಲೈ!
ಬೆಂಗಳೂರು , ಮಂಗಳವಾರ, 8 ಮಾರ್ಚ್ 2022 (14:59 IST)
ಬೆಂಗಳೂರು : ರಷ್ಯಾ-ಉಕ್ರೇನ್ ಯುದ್ಧದ ನಡುವೆ ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ಗಗನಕ್ಕೇರಿದೆ.

ಬೆಂಗಳೂರು ನಗರದ ಕೆಲವೆಡೆ ಗ್ರಾಹಕರಿಗೆ ಅಡುಗೆ ಎಣ್ಣೆ ಖರೀದಿಗೆ ಮಿತಿ ನಿಗದಿಪಡಿಸಲಾಗಿದೆ. ಬೆಂಗಳೂರು ನಗರದಲ್ಲಿ ಅಡುಗೆ ಎಣ್ಣೆ ಬೆಲೆ 200 ರೂ. ಸನಿಹಕ್ಕೆ ತಲುಪಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧದ ಎಫೆಕ್ಟ್ಗೆ ಭಾರತದಲ್ಲಿ ಅಡುಗೆ ಎಣ್ಣೆ ದರದಲ್ಲಿ ಭಾರೀ ಏರಿಕೆ ಕಾಣುತ್ತಿದೆ.

ರಷ್ಯಾ ಮತ್ತು ಉಕ್ರೇನ್ನಲ್ಲಿ ಸೂರ್ಯಕಾಂತಿ ಪ್ರಮುಖ ಬೆಳೆಯಾಗಿದೆ ಹೀಗಾಗಿ ಜಾಗತಿಕ ಮಟ್ಟದಲ್ಲಿ ಅಡುಗೆ ಎಣ್ಣೆ ದರ ಭಾರೀ ಏರಿಕೆ ಕಂಡಿದೆ. ಇದೀಗ ಸೂರ್ಯಕಾಂತಿ ಎಣ್ಣೆ ದರ ಬರೋಬ್ಬರಿ ಲೀಟರ್ಗೆ 40 ರೂ. ಏರಿಕೆ ಕಂಡಿದೆ. ಅಲ್ಲದೇ ಕೆಲವೆಡೆ ಇಷ್ಟೆ ಅಡುಗೆ ಎಣ್ಣೆ ಖರೀದಿಸಬೇಕು ಎಂದು ಗ್ರಾಹಕರಿಗೆ ಕಂಡೀಷನ್ ಹಾಕಿರುವುದು ವರದಿಯಾಗಿದೆ. 

ಬೆಂಗಳೂರಿನಲ್ಲಿ ಮನಸಿಗೆ ಬಂದಷ್ಟು ಅಡುಗೆ ಎಣ್ಣೆ ಖರೀದಿ ಮಾಡುವಂತಿಲ್ಲ ಎಂಬ ಕಂಡೀಷನ್ ಸೂಪರ್ ಮಾರ್ಕೆಟ್ಗಳಲ್ಲಿ ಅಪ್ಲೈ ಮಾಡಲಾಗಿದೆ. ಬೆಂಗಳೂರು ನಗರದ ಕೆಲವು ಸೂಪರ್ ಮಾರ್ಕೆಟ್ ಮತ್ತು ಡಿ ಮಾರ್ಟ್ಗಳಲ್ಲಿ ಕೇವಲ ಮೂರು ಪ್ಯಾಕ್ ಅಡುಗೆ ಎಣ್ಣೆ ಖರೀದಿಗೆ ಅವಕಾಶ ನೀಡಲಾಗಿದೆ. ಸ್ಟಾಕ್ ಖಾಲಿಯಾಗಿದೆ ಹೀಗಾಗಿ ಇಷ್ಟೇ ಖರೀದಿ ಲಿಮಿಟ್ಸ್ ಹಾಕಲಾಗಿದೆ ಎಂದು ಶಾಪ್ ಮಾಲೀಕರು ಈ ಬಗ್ಗೆ ಉತ್ತರಿಸುತ್ತಿದ್ದಾರೆ. 

ಎಲ್ಲಾ ಅಡುಗೆ ಎಣ್ಣೆ ಗಳ ದರ 200 ರೂ. ಸನಿಹದಲ್ಲಿ
ಸನ್ ಪ್ಯೂರ್ ಆಯಿಲ್ – 130 – 170 ರೂ.
ಪ್ರೀಡಂ ಆಯಿಲ್ – 120 – 160 ರೂ.
ಗೋಲ್ಡ್ ವಿನ್ನರ್ – 131 – 170 ರೂ.
ಪ್ಯಾರ ಚೂಟ್ – 130 – 185 ರೂ.


Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ದಿನಾಚರಣೆ ಸಿಎಂ ದಿನಾಚರಣೆ