Select Your Language

Notifications

webdunia
webdunia
webdunia
webdunia

ಮುಂದುವರೆದ ಬಿಡಿಎ ಅಕ್ರಮ ಕೆರೆ ಒತ್ತುವರಿ..!

ಮುಂದುವರೆದ ಬಿಡಿಎ ಅಕ್ರಮ ಕೆರೆ ಒತ್ತುವರಿ..!
bangalore , ಭಾನುವಾರ, 18 ಸೆಪ್ಟಂಬರ್ 2022 (20:32 IST)
ಅಗೆದಷ್ಟು ಅಗಲ-ಬಗೆದಷ್ಟು ಆಳ ಎನ್ನುವ ಹಾಗೇ ಬಿಡಿಎ ಕೆರೆ ಒತ್ತುವರಿ ಕರ್ಮಕಾಂಡ ಬಯಲಾಗುತ್ತಲೇ ಇದೆ. ಎಲ್ಲವೂ ಹಿಂದಿನ ಸರ್ಕಾರ ಮಾಡಿದ್ದು ಅಂತ ಈಗಿನ ಸರ್ಕಾರ ಕೇವಲ ಕೆಲವು ಕಡೆ ರಾಜಕಾಲುವೆ ಒತ್ತುವರಿ ತೆರವು ಮಾಡೋ ಕಳ್ಳಾಟ ಮಾಡುತ್ತಿದೆ. ಕೆರೆಗಳನ್ನ ನುಂಗಿಹಾಕಿ ಸಾವಿರಾರು ನಿವೇಶನಗ ಬಿಡಿಎ ಕೆರೆ ಒತ್ತುವರಿ ಕರ್ಮಕಾಂಡ ಅಷ್ಟಿಸ್ಟಲ್ಲ‌. ಅಸಲಿಗೆ ಬೆಂಗಳೂರಲ್ಲಿ BDA ನುಂಗಿ ನೀರು ಕುಡಿದಿರುವ ಕೆರೆಗಳ ಸಂಖ್ಯೆ ಹಾಗೂ ಅದರಲ್ಲಿ ನಿರ್ಮಾಣವಾದ ಸೈಟ್ ಗಳ ಸಂಖ್ಯೆ ಎಷ್ಟು ಗೊತ್ತಾ..?  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಾಡಿರುವ ಕೆರೆ ಸ್ವಾಹದ ಪಿನ್ ಟು ಪಿನ್ ಡೀಟೇಲ್ಸ್ ನೀಡ್ತೀವಿ ನೋಡಿ. 
 
2013 - 14ರಲ್ಲಿ ಒಂದೇ ಏಟಿಗೆ 23 ಕೆರೆ ನುಂಗಿ ನೀರು ಕುಡಿದಿತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ. ಹೆಚ್ಚಾಗಿ ಬಫರ್ ಝೋನ್ ಅಲ್ಲಿ ನಿವೇಶನ ನೀಡಿದ್ದಾರೆ. ಬಿಡಿಎಗೆ ಹಣ ಕೊಟ್ಟು ಖರೀದಿ ಮಾಡಿದ್ರೂ ಬಿಬಿಎಂಪಿ ಯಿಂದ ಅನುಮತಿ ಸಿಗುತ್ತಿಲ್ಲ. ಎಲ್ಲಾ ಬಫರ್ ಝೋನ್ ಗಳಲ್ಲೂ ಮನೆ ಕಟ್ಟಿರುವುದು, ನಿವೇಶನ ಹಂಚಿಕೆ ಮಾಡಿದ್ದೀವಿ. ಈಗ ಏನೂ ಮಾಡಲು ಬರಲ್ಲ ಅಂದ್ರೇ ಕಷ್ಟ. ಮುಂದೆ ಮತ್ತಷ್ಟು ನೆರೆ ಹೆಚ್ಚಾದ್ರೇ ಯಾರು ಹೊಣೆ. ನೆರೆ ಆಗದೆ ಇರಬೇಕದ್ರೇ ಬಫರ್ ಝೋನ್ ಗಳ ಒತ್ತುವರಿ ತೆರವಾಗಬೇಕು ಅನ್ನೋದು ಜನರ ಒತ್ತಾಯವಾಗಿದೆ
 
 ಮಳೆ ಬಂದಾಗ ನೆರೆ ಆಗೋಕೆ ಕಾರಣ ರಾಜಕಾಲುವೆ, ಕೆರೆ ಒತ್ತುವರಿ ಅಂತ ಹೇಳುತ್ತೆ ಬಿಬಿಎಂಪಿ. ಅದರಲ್ಲೂ ಕೆರೆ ಒತ್ತುವರಿಯೇ ಭಾರೀ ಪ್ರಮಾಣದ ನೆರೆ ಆಗೋಕೆ ಕಾರಣ ಅಂತ ತಜ್ಞರು ಸಹ ಎಚ್ಚರಿಸುತ್ತಲಿದ್ದಾರೆ. ಆದರೆ ದಾಖಲೆ ಪ್ರಮಾಣದಲ್ಲಿ ನಗರದಲ್ಲಿ ಕೆರೆ ಒತ್ತುವರಿಯನ್ನ ಬಿಡಿಎ ಮಾಡಿದೆ. 
ಒಟ್ಟು 46 ಕೆರೆಗಳನ್ನು ಇದೂವರೆಗೂ ಅಕ್ರಮವಾಗಿ ಒತ್ತುವರಿ ಮಾಡಿದೆ. ಇನ್ನು ಬೆಂಗಳೂರು ದಕ್ಷಿಣ ಭಾಗದಲ್ಲಿ ಅತೀ ಹೆಚ್ಚು ಒತ್ತುವರಿ ಮಾಡಲಾಗಿದೆ. ಕೆರೆ ಜಾಗದಲ್ಲಿ 23,835 ನಿವೇಶನಗಳನ್ನ ಹಂಚಿಕೆ ಮಾಡಿದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ. ಇನ್ನೂ ಕೆಲವು ಕಡೆ ನಿವೇಶನ ನಿರ್ಮಿಸಿ ಹಂಚಿಕೆ ಮಾಡುವುದು ಬಾಕಿಯಿದೆ.
 
ಇನ್ನೂ  ಕೆರೆ ಒತ್ತುವರಿಯನ್ನ ಒಪ್ಪಿಕೊಂಡ ಬಿಡಿಎ ಅಧ್ಯಕ್ಷರಾದ ವಿಶ್ವನಾಥ್ 2013-14ರ ಸರ್ಕಾರದ ಅವಧಿಯಲ್ಲಿ ಕೆರೆ ಸ್ವರೂಪ ಕಳೆದುಕೊಂಡಿದೆ ಹಾಗಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಈಗ ಎಲ್ಲಾ ಹಂಚಿಕೆ ಆದ್ಮೆಲೆ ಏನೂ ಮಾಡಲು ಬರಲ್ಲ. ನಮ್ಮ ಸರ್ಕಾರ ಬಂದ ನಂತರ ಹಾಗೂ 2017 ರಲ್ಲಿ ಕೋರ್ಟ್ ಸೂಚನೆಯಂತೆ ಕೆರೆ,ಬಫರ್ ಝೋನ್ ಒತ್ತುವರಿ ಮಾಡಿಕೊಂಡಿಲ್ಲ ಅಂತಾ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಯಿಂದ ಸ್ಥಳ ಪರಿಶೀಲನೆ