Publish Date: Mon, 10 Apr 2023 (18:50 IST)
Updated Date: Mon, 10 Apr 2023 (18:49 IST)
ಧಾರವಾಡ ಜಿಲ್ಲೆಯಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿದ್ದು, ಈ ಏಳರ ಪೈಕಿ ಧಾರವಾಡ ವಿಧಾನಸಭಾ ಕ್ಷೇತ್ರ ಈ ಸಲ ಭಾರೀ ತುರುಸಿನ ಸ್ಪರ್ಧೆಗೆ ಕಾರಣವಾಗಲಿದೆ. ಏಕೆಂದರೆ ಯೋಗೇಶ್ಗೌಡ ಕೊಲೆ ಕೇಸಿನ ಸಿಬಿಐ ತನಿಖೆಯಲ್ಲಿ ಸಿಕ್ಕು, ಜಿಲ್ಲಾ ಪ್ರವೇಶದ ನಿರ್ಬಂಧದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿಗೆ ಈ ಸಲ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ.. ಮತ್ತೊಂದೆಡೆ ಹಾಲಿ ಶಾಸಕ ಅಮೃತ ದೇಸಾಯಿ ಸ್ಪರ್ಧಿಸುವುದು ಖಚಿತ ಎನ್ನಲಾಗುತ್ತಿದೆ.. ಹೀಗಾಗಿ ಈ ಇಬ್ಬರೂ ನಾಯಕರ ಬೆಂಬಲಿಗರು ಈಗಾಗಲೇ ಫೇಸ್ಬುಕ್ನಲ್ಲಿ ದೊಡ್ಡ ಮಟ್ಟದ ವಾರ್ ಶುರು ಮಾಡಿದ್ದಾರೆ.. ಇವರು ಅವರ ಮೇಲೆ, ಅವರು ಇವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸುವುದು ಮಾತ್ರವಲ್ಲದೇ ಕೆಲವೊಂದು ಪೋಸ್ಟ್ಗಳಲ್ಲೂ ವೈಯಕ್ತಿಕ ನಿಂದನೆಯೂ ಶುರುವಾಗಿದೆ.. ಇನ್ನೊಂದೆಡೆ ಅಬ್ಬರದ ಪ್ರಚಾರದ ಮುಖಾಂತರ ಇಬ್ಬರು ನಾಯಕರು ತೊಡೆ ತಟ್ಟಿದ್ದಾರೆ.