Publish Date: Mon, 10 Apr 2023 (18:28 IST)
Updated Date: Mon, 10 Apr 2023 (18:47 IST)
ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಕಣ್ಣೀರು ಪಾಲಿಟಿಕ್ಸ್ ಸದ್ದು ಮಾಡ್ತಿದೆ. ಬಾಗಲಕೋಟೆಯ ಮುಧೋಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದಿದ್ದಕ್ಕೆ ಆಕಾಂಕ್ಷಿ ಸತೀಶ ಬಂಡಿವಡ್ಡರ ಕಣ್ಣೀರಾಕಿದ್ದಾರೆ. ಟಿಕೆಟ್ ತನಗೆ ಸಿಗುತ್ತೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದ ಸತೀಶ್ ಬಂಡಿವಡ್ಡರರಿಗೆ ಟಿಕೆಟ್ ಕೈತಪ್ಪಿದೆ. ಮುಧೋಳ ಮೀಸಲು ವಿಧಾನಸಭಾ ಮತಕ್ಷೇತ್ರಕ್ಕೆ R.B. ತಿಮ್ಮಾಪುರಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದೆ. ಸತೀಶ ಬಂಡಿವಡ್ಡರನ್ನು ಭೇಟಿ ಮಾಡಲು ಅಭಿಮಾನಿಗಳು ಅವರ ಮನೆಗೆ ತೆರಳಿದಾಗ ಸತೀಶ್ ಕಣ್ಣೀರು ಹಾಕಿದ್ದಾರೆ.. ಅಭಿಮಾನಿಗಳ ಎದುರು ಮಂಡಿಯೂರಿ ನಮಸ್ಕರಿಸಿ ಕಣ್ಣೀರು ಹಾಕಿದ್ದಾರೆ.. ಈ ದೃಶ್ಯ ಎಲ್ಲೆಡೆ ವೈರಲ್ ಆಗಿದೆ