ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಎರಡು ವಾರಗಳಿಂದ ತಂಬಿಗೇರಿ ಗ್ರಾಮದಲ್ಲಿ ಕಲುಷಿತ ನೀರು ಸಮಸ್ಯೆ ಕಾಣಿಸಿಕೊಂಡಿದ್ದು, ಇದನ್ನು ಸೇವಿಸಿದ್ದರಿಂದ ಗ್ರಾಮದ ಹಲವರು ಆಸ್ಪತ್ರೆ ಸೇರುವಂತಾಯಿತು.
ಸರಬರಾಜು ಆಗುವ ಪೈಪ್‌ನಪ್ಪಿ ಕಲುಷಿತ ನೀರು ಸೇರಿ ಹಲವರು ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು 25 ಜನರನ್ನು ದಾವಣಗೆರೆ ಮತ್ತು ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು ಈ ಪೈಕಿ ಆವರು ಸಾವನ್ನಪ್ಪಿದ್ದಾರೆ.
ಅಕ್ಟೋಬರ್ 17ರಂದು 35 ವರ್ಷದ ಸುರೇಶ್ ಭೋವಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ನಂತರ ಅಕ್ಟೋಬರ್ 21ರಂದು ದಾವಣಗೆರೆಯ ಚಿಗಟೇರಿ ಸರ್ಕಾರಿ ಆಸ್ಪತ್ರೆಯಲ್ಲಿ 45 ಮಹಾಂತೇಶ ಭೋವಿ ಮೃತಪಟ್ಟರು. ನಿನ್ನೆ ತಡರಾತ್ರಿ ಹಸುಗೂಸು ಸೇರಿ ಮೂವರು ಸಾವನ್ನಪ್ಪಿದ್ದಾರೆ. ಈ ಸಾವುಗಳು ನೀರಿನ ಮಾಲಿನ್ಯದಿಂದ ಸಂಭವಿಸಿವೆ ಎಂದು ಲ್ಯಾಬ್ ವರದಿಗಳು ದೃಢಪಡಿಸಿವೆ.
ಕಲುಷಿತ ನೀರು ಸೇವಿಸಿ ಇನ್ನೂ ನಾಲ್ವರು ಗ್ರಾಮಸ್ಥರು ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.