ಈಗ ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್ ಎದುರಾಗಿದೆ.ಸರ್ಕಾರದ ಹೆಸ್ರಲ್ಲಿ ಮದ್ಯಪ್ರಿಯರಿಂದ ಮನಬಂದಂತೆ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರು ಹಣ ಪೀಕ್ತಿದ್ದಾರೆ.ಹೆಚ್ಚಳವಾದ ಶೇ. 20% ಅಬಕಾರಿ ಶುಲ್ಕಕ್ಕೆ, ಹೆಚ್ಚುವರಿ 40-45 % ಹಣ ಬಾರ್ ಮಾಲೀಕರು ಪಡೆಯುತ್ತಿದ್ದಾರೆ.
ಅಬಕಾರಿ ಕಮಿಷನರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.ಪ್ರತಿ ಮದ್ಯದ ದರಕ್ಕಿಂತ 60-70 ರೂ. ಹೆಚ್ಚುವರಿ ಹಣ ಮಾಲೀಕರು ಪಡೆಯುತ್ತಿದ್ದು,ಹೆಚ್ಚುವರಿ ಹಣ ಕೇಳ್ತಿದ್ದ ಬಾರ್ ಗಳ ವಿರುದ್ಧ ಅಬಕಾರಿ ಇಲಾಖೆಗೆ ಸಾಲು ಸಾಲು ದೂರು ಬಂದಿದೆ.ಹಣ ವಸೂಲಿ ಮಾಡುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳ ಮೇಲೆ ದಾಳಿ ಮಾಡಲು ತಂಡ ರಚನೆ ಮಾಡಲಾಗಿದೆ.ಹೆಚ್ಚುವರಿ ಹಣ ಪಡೆದ್ರೆ ಅಬಕಾರಿ ಇಲಾಖೆ ಅಧಿಕಾರಿಗಳು ಮಾರುವೇಷದಲ್ಲಿ ಬರ್ತಾರೆ.ಮಾರುವೇಷದಲ್ಲಿ ಬಂದ್ರೆ ರೆಡ್ ಹ್ಯಾಂಡಾಗಿ ಸಿಕ್ಕಾಕೊಳ್ಳುವುದು ಪಕ್ಕಾ.ಒಂದು ವೇಳೆ ತನಿಖೆ ವೇಳೆ ಸಿಕ್ಕರೆ ನಿಮ್ಮ ಬಾರ್ ಲೈಸನ್ಸ್ ಕ್ಯಾನ್ಸಲ್ ಆಗಲಿದೆ