ಛತ್ರಪತಿ ಶಿವಾಜಿ ನೆನಪಿನಲ್ಲಿ ಬೃಹತ್ ಕಟ್ಟಡ ನಿರ್ಮಾಣ: ನಿತಿನ್ ಗಡ್ಕರಿ

Webdunia
ಮಂಗಳವಾರ, 21 ನವೆಂಬರ್ 2023 (17:00 IST)
ಮುಂಬೈಯಲ್ಲಿ ಬುರ್ಜಾ ಖಾಲೀಫಾ ಕಟ್ಟಡ ನಿರ್ಮಾಣದ ಬಗ್ಗೆ ನಾನು ಘೋಷಣೆ ಮಾಡುತ್ತಿಲ್ಲ. ಆದರೆ ನನ್ನ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಮುಂಬೈಯಲ್ಲಿ ಬುರ್ಜಾ ಖಾಲೀಫಾಗಿಂತ ವಿಶ್ವದಲ್ಲಿಯೇ ಅತಿ ಎತ್ತರವಾದ ಬೃಹತ್ ಕಟ್ಟಡ ನಿರ್ಮಾಣವಾಗಬೇಕು. ಅದಕ್ಕೆ ಛತ್ರಪತಿ ಶಿವಾಜಿ ಮಹಾರಾಜಾ ಟವರ್ ಎಂದು ಹೆಸರಿಡಬೇಕು ಎನ್ನುವುದು ನನ್ನ ಕನಸಾಗಿದೆ ಎಂದು ಹೇಳಿದ್ದಾರೆ.
 
ದುಬೈಯಲ್ಲಿರುವ ವಿಶ್ವದ ಅತಿ ಎತ್ತರದ ಪ್ರತಿಷ್ಠಿತ ಬುರ್ಜ ಖಾಲೀಫಾ ಕಟ್ಟಡದಂತೆ ಮುಂಬೈಯಲ್ಲಿ ಮರಾಠಾ ಯೋಧ ಛತ್ರಪತಿ ಶಿವಾಜಿ ನೆನಪಿನಲ್ಲಿ ಬೃಹತ್ ಕಟ್ಟಡ ನಿರ್ಮಿಸಬೇಕು ಎನ್ನುವುದೇ ನನ್ನ ಬಯಕೆಯಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
 
ಕಟ್ಟಡದ ಮೊದಲು 30 ಅಂತಸ್ತುಗಳು ಸಮಾರಂಭ ಕಾರ್ಯಗಳಿಗಾಗಿ, ನಂತರ 30 ಅಂತಸ್ತು ರೆಸ್ಟುರಾಂಟ್‌ಗಳಿಗಾಗಿ, ತದನಂತರದ 30 ಅಂತಸ್ತು ಹೋಟೆಲ್‌ಗಳಿಗಾಗಿ, ಉಳಿದ 20 ಅಂತಸ್ತುಗಳು ಮಾಲ್‌ಗಳಿಗಾಗಿ ಮೀಸಲಿಡಬೇಕು. ಪಾರ್ಕಿಂಗ್‌ಗಾಗಿ ಅಂಡರ್‌ಗ್ರೌಂಡ್ ನಿರ್ಮಿಸಬೇಕು ಎಂದು ತಮ್ಮ ಕನಸಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.
     
ಬುರ್ಜ ಖಾಲೀಫಾ ವಿಶ್ವದಲ್ಲಿಯೇ ಅತಿ ಎತ್ತರದ (2722 ಅಡಿ ಎತ್ತರ) ಕಟ್ಟಡವಾಗಿದೆ. ಕಟ್ಟಡದ ತುತ್ತತುದಿಯಲ್ಲಿ ಶಿವಾಜಿ ಮಹಾರಾಜ್ ಅವರ ಆರ್ಟ್ ಗ್ಯಾಲರಿ, ಮ್ಯೂಜಿಕಲ್ ಫೌಂಟೇನ್, ಲೈಟ್‌ಗಳು ಮತ್ತು ಪರಿಶುದ್ಧವಾದ ನೀರಿರಬೇಕು ಎಂದು ಹೇಳಿದ್ದಾರೆ
 
ಅಂಡಮಾನ್ ಮತ್ತು ಮಾರಿಷಿಯಸ್‌ನಲ್ಲಿರುವ ಸಮುದ್ರದಂತೆ ಮುಂಬೈ ಸಮುದ್ರದ ನೀರು ಕೂಡಾ ಪರಿಶುದ್ಧವಾಗಿರಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಸ್ಟರ್ ಕ್ಲೀನ್, ಸ್ಮಶಾನ ಭೂಮಿ, ಕೆರೆ ಅಂಗಳವನ್ನು ತಮ್ಮ ಹೆಸರಿಗೆ ಮಾಡಿಕೊಂಡದ್ದು ಹೇಗೆ

ಆರೋಗ್ಯದಲ್ಲಿ ಏರುಪೇರು, ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯರನ್ನು ಭೇಟಿಯಾದ ಪುತ್ರ ಯತೀಂದ್ರ

ಎಐ ದುರ್ಬಳಕೆ ಬಗ್ಗೆ ಶ್ರೀಲೀಲಾ ಗರಂ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ನಟಿ

ಗೋವಾ ನೈಟ್‌ಕ್ಲಬ್ ದುರಂತ, ಪರಾರಿಯಾಗಿದ್ದ ಮಾಲಕ ಸಹೋದರರ ವಿಚಾರಣೆ

ಖಾಕಿ ಮೇಲೆ ಕೈ ಹಾಕಿದ ಮೂವರು ಮೂವರಿಗೆ 7 ವರ್ಷ ಜೈಲೇ ಗತಿ

ಮುಂದಿನ ಸುದ್ದಿ
Show comments