Select Your Language

Notifications

webdunia
webdunia
webdunia
webdunia

ಗುಜುರಾತ್ ನಲ್ಲಿ ಕಾಂಗ್ರೆಸ್ ಬಾವುಟ..!!!

ಗುಜುರಾತ್ ನಲ್ಲಿ ಕಾಂಗ್ರೆಸ್ ಬಾವುಟ..!!!
ಬೆಂಗಳೂರು , ಶನಿವಾರ, 9 ಜುಲೈ 2022 (15:22 IST)
ವರ್ಷಾಂತ್ಯಕ್ಕೆ ನಡೆಯಲಿರುವ ಗುಜರಾತ್‌ ವಿಧಾನಸಭೆ ಚುನಾವಣೆಯನ್ನು (Gujarat Assembly elections) ಗೆಲ್ಲಲೇಬೇಕು ಎಂದು ಹಟಕ್ಕೆ ಬಿದ್ದಿರುವ ಕಾಂಗ್ರೆಸ್‌ (Congress), ಆ ಕನಸು ಸಾಕಾರಕ್ಕೆ ಎರಡು ಮಹತ್ವದ ತಂತ್ರಗಾರಿಕೆಗಳನ್ನು ರೂಪಿಸಿದೆ.
ಕಾಂಗ್ರೆಸ್‌ ವರ್ಸಸ್‌ ಪ್ರಧಾನಿ ನರೇಂದ್ರ ಮೋದಿ' ಎಂದು ಬಿಂಬಿತವಾಗುವುದನ್ನು ತಡೆಯಲು ಪಕ್ಷದ ಒಟ್ಟಾರೆ ಪ್ರಚಾರ ಬಿಜೆಪಿಯ ಸ್ಥಳೀಯ ನಾಯಕತ್ವದ ವಿರುದ್ಧ ಇರುವಂತೆ ನೋಡಿಕೊಳ್ಳುವ ನಿಲುವಿಗೆ ಬಂದಿದೆ. ಇದೇ ವೇಳೆ, ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದೇ ಇರಲು ನಿರ್ಧಾರ ತೆಗೆದುಕೊಂಡಿದೆ.
ಗುಜರಾತ್‌ ಮಟ್ಟದಲ್ಲಿ ಬಿಜೆಪಿಗೆ (BJP) ಅತ್ಯಂತ ಪ್ರಭಾವಿ ಎನ್ನಬಹುದಾದ ನಾಯಕ ಇಲ್ಲ ಎಂಬುದು ಕಾಂಗ್ರೆಸ್ಸಿನ ನಂಬಿಕೆ. ಹೀಗಾಗಿ ಈ ಚುನಾವಣೆ ಮೋದಿ ವರ್ಸಸ್‌ ಕಾಂಗ್ರೆಸ್‌ ಎಂಬುದನ್ನು ತಪ್ಪಿಸಿ, ಸ್ಥಳೀಯ ಸಮಸ್ಯೆಗಳನ್ನು ಪ್ರಸ್ತಾಪಿಸಿ ಮತದಾರರ ಮನಗಗೆಲ್ಲಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಣೆಯಾಗಿದೆ ಸುಬೇದಾರ್ ಮೇಜರ್ ಪತ್ತೆ