Select Your Language

Notifications

webdunia
webdunia
webdunia
webdunia

ಬಂದೂಕ್, ಬಾಂಬ್ ಮಾಡುವವರ ಬೆನ್ನಿಗೆ ನಿಂತಿದ್ದೀರಿ, ಆರ್ ಎಸ್ಎಸ್ ಗೆ ಬೆದರಿಕ ಹಾಕ್ತಿದ್ದೀರಿ

RSS uniform

Krishnaveni K

ಬೆಂಗಳೂರು , ಸೋಮವಾರ, 13 ಅಕ್ಟೋಬರ್ 2025 (11:37 IST)
Photo Credit: X
ಬೆಂಗಳೂರು: ಆರ್ ಎಸ್ಎಸ್ ನಿಷೇಧಿಸಬೇಕು ಎಂದು ಬೇಡಿಕೆಯಿಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಹಿಂದೂ ಸಂಘಟನೆಗಳು ಪ್ರಶ್ನೆ ಮಾಡಿದ್ದು ಬಂದೂಕು, ಬಾಂಬ್ ಇಡುವವರ ಬೆನ್ನಿಗೆ ನಿಲ್ಲುತ್ತೀರಿ ಎಂದು ಕಿಡಿ ಕಾರಿದೆ.

ಆರ್ ಎಸ್ಎಸ್ ಶತಮಾನೋತ್ಸವ ಕಾರ್ಯಕ್ರಮ ಬೆನ್ನಲ್ಲೇ ರಾಜ್ಯದಲ್ಲಿ ಸಂಘಟನೆಯ ಚಟುವಟಿಕೆಗಳಿಗೆ ನಿಯಂತ್ರಣ ಹೇರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಮನವಿ ಮಾಡಿದ್ದುರು. ಇದು ಈಗ ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ.

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಹಿಂದೂಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಡು ರಸ್ತೆಯಲ್ಲಿ ನಿಂತು ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರನ್ನು ಸುಮ್ಮನೇ ಬಿಡುತ್ತೀರಿ. ಆದರೆ ಆರ್ ಎಸ್ಎಸ್ ಮೇಲೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದ್ದೀರಿ ಎಂದು ಕಿಡಿ ಕಾರಿದೆ.

ಆರ್ ಎಸ್ಎಸ್ ಶತಮಾನೋತ್ಸವ ನೋಡಿದ ನಿಮಗೆ ಹೊಟ್ಟೆ ಉರಿಯಾಗಿದೆ. ಇದಕ್ಕೇ ಆರ್ ಎಸ್ಎಸ್ ಮೇಲೆ ಹಗೆ ಸಾಧಿಸುತ್ತಿದ್ದೀರಿ. ಆರ್ ಎಸ್ಎಸ್ ಶಾಖೆಗೆ ಭೇಟಿ ಕೊಟ್ಟು ನೋಡಿ. ಏನು ಸಮಾಜದ್ರೋಹಿ ಕೆಲಸ ಮಾಡುತ್ತಿದೆ ಎಂದು ಹೇಳಲಿ ಎಂದು ಕೆಲವರು ಸವಾಲು ಹಾಕಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾರಂಟಿಗಳಿಂದ ಅಭಿವೃದ್ಧಿಯಾಗುತ್ತಿಲ್ಲವೆಂದು ನಿಮ್ಮವರೇ ಒಪ್ಪಿಕೊಂಡ್ರಲ್ಲಾ: ಆರ್ ಅಶೋಕ್ ಟಾಂಗ್