Select Your Language

Notifications

webdunia
webdunia
webdunia
webdunia

ಯಡಿಯೂರಪ್ಪರನ್ನು ಖೆಡ್ಡಾಗೆ ಕೆಡುವಲು ಕಾಂಗ್ರೆಸ್ ರಣತಂತ್ರ

ಯಡಿಯೂರಪ್ಪರನ್ನು ಖೆಡ್ಡಾಗೆ ಕೆಡುವಲು ಕಾಂಗ್ರೆಸ್ ರಣತಂತ್ರ
ಬೆಂಗಳೂರು , ಮಂಗಳವಾರ, 28 ಫೆಬ್ರವರಿ 2017 (19:46 IST)
ಡೈರಿ ವಿವಾದದಿಂದ ಆಕ್ರೋಶಗೊಂಡಿರುವ ಕಾಂಗ್ರೆಸ್ ಸರಕಾರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರನ್ನು ಖೆಡ್ಡಾಗಿ ಕೆಡುವಲು ರಣತಂತ್ರ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
 
ರಾಜ್ಯದ ಹೈಕೋರ್ಟ್ ಯಡಿಯೂರಪ್ಪ ವಿರುದ್ಧದ 15 ಪ್ರಕರಣಗಳನ್ನು ರದ್ದುಗೊಳಿಸಿರುವುದನ್ನು ವಿರೋಧಿಸಿ ಮೇಲ್ಮನವಿ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
 
ಯಡಿಯೂರಪ್ಪರನ್ನು ಮಣಿಸಲು ಕೋರ್ಟ್ ಉತ್ತಮ ವೇದಿಕೆ ಎಂದು ಮನಗಂಡಿರುವ ಕಾಂಗ್ರೆಸ್ ಸರಕಾರ, ಪ್ರಕರಣಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
 
ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ, ನ್ಯಾಯಾಲಯಕ್ಕೆ ಸೂಕ್ತ ದಾಖಲಾತಿಗಳನ್ನು ಒದಗಿಸುವುದರೊಂದಿಗೆ ಖ್ಯಾತನಾಮ ವಕೀಲರನ್ನು ನೇಮಿಸಲು ಕೂಡಾ ಕಾಂಗ್ರೆಸ್ ಸರಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಪಾರ್ಲಿಮೆಂಟ್‌ಗೆ ಹೆಚ್ಚು ಹೋಗಲ್ಲ: ದೇವೇಗೌಡ